ಕರ್ನಾಟಕ

karnataka

ETV Bharat / state

ದಸರಾ: ನಾಳೆಯಿಂದಲೇ ಅಭಿಮನ್ಯು ಆ್ಯಂಡ್​​​​ ಟೀಂಗೆ ತಾಲೀಮು ಆರಂಭ

ಸರಳ ದಸರಾ ಹಿನ್ನೆಲೆ ಈ ಬಾರಿ 5 ಆನೆಗಳು ಮಾತ್ರ ದಸರಾದಲ್ಲಿ ಪಾಲ್ಗೊಳ್ಳುತ್ತಿವೆ. ಇದಲ್ಲದೆ ನಾಳೆ ಆನೆಗಳು ಅರಮನೆ ತಲುಪಲಿದ್ದು, ನಾಳೆಯಿಂದಲೇ ತಾಲೀಮು ಆರಂಭವಾಗಲಿದೆ.

By

Published : Oct 1, 2020, 8:04 PM IST

Elephant Abhimanyu
ಅಭಿಮನ್ಯು ಆನೆ

ಮೈಸೂರು: ಕೊರೊನಾ ಆರ್ಭಟದ ನಡುವೆ ಸರಳ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಗಜಪಡೆ ಕ್ಯಾಪ್ಟನ್ ಅಭಿಮನ್ಯು ಆ್ಯಂಡ್​​​ ಟೀಂ ನಾಡಿಗೆ ಎಂಟ್ರಿ ಕೊಟ್ಟಿದೆ.

ಹುಣಸೂರು ತಾಲೂಕಿನ ವೀರನ ಹೊಸಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಗಜಪಯಣ ಮುಗಿಸಿ, ಮೈಸೂರಿನ ಅರಣ್ಯ ಭವನದಲ್ಲಿ ಅಭಿಮನ್ಯು, ಗೋಪಿ, ವಿಕ್ರಮ, ಕಾವೇರಿ, ವಿಜಯ ಆನೆಗಳು ವಿಶ್ರಾಂತಿ ಪಡೆಯುತ್ತಿದ್ದಾವೆ.

ದಸರಾ ಆನೆಗಳಿಗೆ ನಾಳೆಯಿಂದ ತಾಲೀಮು ಆರಂಭ

ಸರಳ ದಸರಾ ಹಿನ್ನೆಲೆ ಈ ಬಾರಿ 5 ಆನೆಗಳು ಮಾತ್ರ ದಸರಾದಲ್ಲಿ ಪಾಲ್ಗೊಳ್ಳುತ್ತಿವೆ. ಇದಲ್ಲದೆ ನಾಳೆ ಆನೆಗಳು ಅರಮನೆ ತಲುಪಲಿದ್ದು, ನಾಳೆಯಿಂದಲೇ ತಾಲೀಮು ಆರಂಭವಾಗಲಿದೆ.

ದಸರಾದಲ್ಲಿ ಪಾಲ್ಗೊಳ್ಳಲಿರುವ ಅಭಿಮನ್ಯು ತಂಡ

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಮೈಸೂರು 2ನೇ ಸ್ಥಾನದಲ್ಲಿರುವುದರಿಂದ, ದಸರಾ ಯಶಸ್ವಿಗೊಳಿಸುವುದೇ ದೊಡ್ಡ ಸವಾಲಾಗಿದೆ. ಅವುಗಳ ಸುರಕ್ಷತೆ ಹಾಗೂ ಜಾಗೃತಿ ವಹಿಸುವುದೇ ಅರಣ್ಯ ಇಲಾಖೆಗೂ ಕೂಡ ಸವಾಲಾಗಿ ಪರಿಣಮಿಸಿದೆ. ಮಾವುತ ಹಾಗೂ ಕಾವಾಡಿಗಳು ಕೂಡ ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ABOUT THE AUTHOR

...view details