ಕರ್ನಾಟಕ

karnataka

ETV Bharat / state

ಮೈಸೂರು: ಕಲ್ಯಾಣ ಮಂಟಪದಿಂದ ಬಾಲಕಿ ಅಪಹರಿಸಿದ ಆರೋಪಿ ಬಂಧನ - ಮೈಸೂರಿನಲ್ಲಿ ಅಪ್ರಾಪ್ತೆ ಅಪಹರಣ

ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಅಪಹರಣ ಹಾಗೂ ಬಾಲ್ಯ ವಿವಾಹ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

Accuse arrested
ಆರೋಪಿ ಬಂಧನ

By

Published : May 6, 2022, 10:17 AM IST

ಮೈಸೂರು:ಅಪ್ರಾಪ್ತೆಯನ್ನು ಕಲ್ಯಾಣ ಮಂಟಪದಿಂದಲೇ ಅಪಹರಿಸಿದ ವ್ಯಕ್ತಿಯೊಬ್ಬ ಮದುವೆಯಾಗಿರುವ ಘಟನೆ ನಗರದ ಗೋಕುಲಂ ಬಡಾವಣೆಯ ಶಿವಮ್ಮ ಮಹದೇವಪ್ಪ ಚೌಲ್ಟ್ರಿಯಲ್ಲಿ ನಡೆದಿದೆ. ಸಂಬಂಧಿಕರ ಮದುವೆಗೆಂದು ಪೋಷಕರೊಂದಿಗೆ ಬಂದಿದ್ದ ಬಾಲಕಿಯನ್ನು ಮಂಡ್ಯ ಜಿಲ್ಲೆಯ ಬೇಲೂರು ಗ್ರಾಮದ ಪ್ರತಾಪ್ ಅಪಹರಿಸಿ, ಮಂಡ್ಯದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾನೆ.

ಬಾಲಕಿ ಪೋಷಕರಿಂದ ದೂರು

ಬೆಳಗ್ಗೆ ಬಾಲಕಿ ಕಾಣದಿರುವುದನ್ನು ಕಂಡು ಗಾಬರಿಯಾದ ಪೋಷಕರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಅಪಹರಣ ಹಾಗೂ ಬಾಲ್ಯ ವಿವಾಹ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆಯಲಾಗಿದೆ. ಬಾಲಕಿಯನ್ನು ಬಾಲಮಂದಿರದಲ್ಲಿ ಇರಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಎರಡು ಒಮಿಕ್ರಾನ್ ಉಪತಳಿ ಪತ್ತೆ!

ABOUT THE AUTHOR

...view details