ಮೈಸೂರು: ಅಂಗಡಿಯೊಂದರಲ್ಲಿ ಪರವಾನಗಿ ಪರಿಶೀಲನೆ ನಡೆಸುತ್ತಿದ್ದ ನಗರ ಪಾಲಿಕೆಯ ಆರೋಗ್ಯ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿರುವ ಘಟನೆ ನಗರದ ಕೆ.ಟಿ. ಸ್ಟ್ರೀಟ್ ಬಳಿ ನಡೆದಿದೆ.
ನಗರದ ಕೆ.ಟಿ. ಸ್ಟ್ರೀಟ್ನಲ್ಲಿರುವ ಅಂಗಡಿಗಳ ಪರವಾನಗಿಯನ್ನು ಪರಿಶೀಲನೆ ನಡೆಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಜಿ.ವಿ.ಯೋಗೇಶ್ ಎಂಬುವವರ ಮೇಲೆ ಅಂಗಡಿಯ ಯುವಕ ಕಾಸಿಫ್ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.