ಕರ್ನಾಟಕ

karnataka

ETV Bharat / state

ಮೈಸೂರು: ಮೊಬೈಲ್​ನಿಂದ ಹೊಡೆದು ಚಿರತೆ ಬಾಯಿಯಿಂದ ಪಾರಾದ ಯುವಕ! - ಗದ್ದೆಗೆ ನೀರು ಬಿಡಲು ಹೋದ ಸತೀಶ್ ಮೇಲೆ ಚಿರತೆ ದಾಳಿ

ಮೈಸೂರಿನ ತಿ ನರಸೀಪುರ ತಾಲೂಕಿನ ಬಳಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ. ಹೊಲಕ್ಕೆ ಹೋದ ರೈತರ ಮೇಲೆ ಚಿರತೆಗಳು ದಾಳಿ ನಡೆಸುತ್ತಿರುವ ಘಟನೆಗಳು ಮುನ್ನೆಲೆಗೆ ಬರುತ್ತಿವೆ. ಈಗ ಯುವಕನೊಬ್ಬನ ಮೇಲೆ ಚಿರತೆ ದಾಳಿ ಮಾಡಿದ್ದು, ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

young man escaped  young man escaped from leopard  man escaped from leopard in Mysore  ಮೊಬೈಲ್​ನಿಂದ ಹೊಡೆದು ಚಿರತೆ ಬಾಯಿಯಿಂದ ಪಾರಾದ ಯುವಕ  ಜನರಲ್ಲಿ ಮತ್ತೆ ಹೆಚ್ಚಿದ ಆತಂಕ  ಯುವಕನೊಬ್ಬನ ಮೇಲೆ ಚಿರತೆ ದಾಳಿ  ಪ್ರಾಣಾಪಾಯದಿಂದ ಪಾರಾಗಿರುವ ಘಟನೆ  ಗದ್ದೆಗೆ ನೀರು ಬಿಡಲು ಹೋದ ಸತೀಶ್ ಮೇಲೆ ಚಿರತೆ ದಾಳಿ  ಸತೀಶ್​ ತನ್ನ ಮೊಬೈಲ್​ನಿಂದ ಚಿರತೆಗೆ ಹೊಡೆದು ಹಲ್ಲೆ
ಮೊಬೈಲ್​ನಿಂದ ಹೊಡೆದು ಚಿರತೆ ಬಾಯಿಯಿಂದ ಪಾರಾದ ಯುವಕ

By

Published : Dec 19, 2022, 11:55 AM IST

ಮೈಸೂರು:ಚಿರತೆ ದಾಳಿಯಿಂದ ಯುವಕನೊಬ್ಬ ಪಾರಾಗಿ ಬಂದ ಘಟನೆ ತಿ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ನುಗ್ಗಳ್ಳಿಕೊಪ್ಪಲು ಗ್ರಾಮದ ಸತೀಶ್ (33) ಚಿರತೆಯಿಂದ ಪಾರಾದ ಯುವಕ. ಕಬ್ಬಿನ ಗದ್ದೆಗೆ ನೀರು ಬಿಡಲು ಹೋದ ಸತೀಶ್ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಸತೀಶ್​ ತನ್ನ ಮೊಬೈಲ್​ನಿಂದ ಚಿರತೆಗೆ ಹೊಡೆದು ಹಲ್ಲೆಗೊಳಿಸಿದ್ದಾನೆ. ಬಳಿಕ ಅಲ್ಲಿಂದ ಗ್ರಾಮದ ಬಳಿಗೆ ಓಡೋಡಿ ಬಂದಿದ್ದಾನೆ.

ಗ್ರಾಮಸ್ಥರು ಸತೀಶ್​ ಪರಿಸ್ಥಿತಿ ತಿಳಿದು ಆತಂಕಗೊಂಡಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಸತೀಶ್​ನನ್ನು ಮಂಡ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ‌. ಅರಣ್ಯ ಇಲಾಖೆ ಕಾರ್ಯ ವೈಖರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ:ತಿ.ನರಸೀಪುರದಲ್ಲಿ ಚಿರತೆ ದಾಳಿಗೆ ಮತ್ತೊಂದು ಬಲಿ

ABOUT THE AUTHOR

...view details