ಕರ್ನಾಟಕ

karnataka

ETV Bharat / state

ಮಳೆಗೆ ಬಿದ್ದ ಮನೆ, ಶೌಚಾಲಯದಲ್ಲೇ ಮಹಿಳೆಯ ವಾಸ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ - ನಂಜನಗೂಡು ತಹಶೀಲ್ದಾರ್ ಶಿವಮೂರ್ತಿ

ಮೈಸೂರಿನ ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಮಹಿಳೆಯನ್ನು ತಹಶೀಲ್ದಾರ್ ಶಿವಮೂರ್ತಿ ಭೇಟಿ ಮಾಡಿ, ಹಣ ಬಿಡುಗಡೆ ಮಾಡುವ ಭರವಸೆ ಕೊಟ್ಟಿದ್ದಾರೆ.

a-woman-living-in-the-toilet-after-her-house-collapsed-due-to-rain
ಮಳೆಗೆ ಬಿದ್ದ ಮನೆ, ಶೌಚಾಲಯದಲ್ಲಿ ಮಹಿಳೆ ವಾಸ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ

By

Published : Aug 9, 2022, 6:14 PM IST

ಮೈಸೂರು:ನಿರಂತರ ಮಳೆಯಿಂದ ಮನೆ ಕುಸಿದು ಬಿದ್ದು ಆಶ್ರಯವಿಲ್ಲದೆ ಮಹಿಳೆಯೊಬ್ಬರು ಶೌಚಾಲಯದಲ್ಲಿ ವಾಸಿಸುತ್ತಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ.

ಹೆಡತಲೆ ಗ್ರಾಮದ ನಿವಾಸಿ ಹೆಚ್.ಬಿ‌.ಸಿದ್ದಮ್ಮ ಮಳೆಯಿಂದ ಮನೆ ಕಳೆದುಕೊಂಡು ಶೌಚಾಲಯದಲ್ಲಿ ವಾಸಿಸುತ್ತಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಶಿವಮೂರ್ತಿ, ಸಿದ್ದಮ್ಮನಿಗೆ ಅಗತ್ಯ ವಸ್ತುಗಳ ಖರೀದಿಗೆ 10 ಸಾವಿರ ರೂ. ಚೆಕ್​ ಹಾಗೂ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಳೆಗೆ ಬಿದ್ದ ಮನೆ, ಶೌಚಾಲಯದಲ್ಲಿ ಮಹಿಳೆ ವಾಸ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ಅಲ್ಲದೇ, ನಾಳೆ ತಾತ್ಕಾಲಿಕವಾಗಿ 95 ಸಾವಿರ ರೂ. ಮೊತ್ತದ ಚೆಕ್ ನೀಡಲಾಗುವುದು‌. ಇನ್ನುಳಿದಂತೆ ಮನೆ ನಿರ್ಮಾಣವಾಗುತ್ತಿದ್ದಂತೆ ಹಂತ-ಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದು ತಹಶೀಲ್ದಾರ್ ಅಭಯ ನೀಡಿದರು. ಇತ್ತ, ಮನೆ ಕಳೆದುಕೊಂಡು ನಿರ್ಗತಿಕರಾದ ಸಿದ್ದಮ್ಮ ಅವರಿಗೆ ಆದಷ್ಟು ಬೇಗನೆ ಮನೆ ನಿರ್ಮಿಸಲು ತಾಲೂಕಾಡಳಿತ ಕ್ರಮ ವಹಿಸಬೇಕೆಂದು ರೈತ ಮುಖಂಡ ವಿದ್ಯಾಸಾಗರ್ ಒತ್ತಾಯಿಸಿದರು.

ಇದನ್ನೂ ಓದಿ:ಇದಾವ ನ್ಯಾಯ?: 3 ವರ್ಷದಲ್ಲಾದ ನೆರೆ ಹಾನಿ ₹78,395 ಕೋಟಿ; ಕೊಟ್ಟ ಪರಿಹಾರ ಕೇವಲ ₹10,826 ಕೋಟಿ!

ABOUT THE AUTHOR

...view details