ಮೈಸೂರು: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆ ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ವಾಜಮಂಗಲ-ವರಕೋಡು ಗ್ರಾಮದ ನಡುವಿನ ಅಪ್ಪಗೆರೆ ಬಳಿ ಘಟನೆ ನಡೆದಿದೆ.
ಮೈಸೂರು: ಬೈಕ್‌ಗಳ ನಡುವೆ ಡಿಕ್ಕಿ; ಓರ್ವ ಮಹಿಳೆ ಸಾವು - collision between bikes at mysore
ಮೈಸೂರು ತಾಲೂಕಿನ ವಾಜಮಂಗಲ-ವರಕೋಡು ಗ್ರಾಮದ ನಡುವಿನ ಅಪ್ಪಗೆರೆ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆ ಮೃತಪಟ್ಟಿದ್ದಾರೆ.
ವರಕೋಡು ಗ್ರಾಮದ ನಿವಾಸಿ ಪಲ್ಲವಿ(29) ಮೃತರು. ಮೈಸೂರಿನ ಸೀರೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತಿ ಮಹದೇವ್ ಅವರೊಂದಿಗೆ ಬೈಕ್ನಲ್ಲಿ ವರಕೋಡು ಕಡೆಯಿಂದ ಮೈಸೂರಿಗೆ ಬರುವಾಗ ವಾಜಮಂಗಲ ಗ್ರಾಮದ ಕಡೆಯಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಲ್ಲವಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಲ್ಲವಿ ಪತಿ ಮಹದೇವ್ ಹಾಗೂ ಡಿಕ್ಕಿ ಹೊಡೆದ ಬೈಕ್ ಸವಾರನೂ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.