ಮೈಸೂರು:ಮೈಸೂರಿನ ಅರಣ್ಯ ಭವನದಲ್ಲಿ ನಡೆದ ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆಯಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛವಿಟ್ಟು, ಮೂರು ಸುತ್ತು ಕುಶಾಲ ತೋಪುಗಳನ್ನ ಗಾಳಿಯಲ್ಲಿ ಸಿಡಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ, ಕುಶಾಲ ತೋಪು ಸಿಡಿಸಿ ಗೌರವ ಸಮರ್ಪಣೆ - ಅರಣ್ಯ ಹುತಾತ್ಮರ ದಿನಾಚರಣೆ
ಮೈಸೂರಿನ ಅರಣ್ಯ ಭವನದಲ್ಲಿ ನಡೆದ ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆ ವೇಳೆ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛವಿಟ್ಟು, ಮೂರು ಸುತ್ತು ಕುಶಾಲ ತೋಪುಗಳನ್ನ ಸಿಡಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆಯ ಸಮಿತಿ ಹಾಗೂ ಅರಣ್ಯ ಭವನ ಮೈಸೂರು ವೃತ್ತ, ಮೈಸೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಐಜಿಪಿ ವಿಪುಲ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ಅರಣ್ಯ ಇಲಾಖೆಯ ಸಿಬ್ಬಂದಿ ವೃತ್ತಿ ಶ್ರೇಷ್ಠವಾದದ್ದು ಎಂದರು.
ನಾವು ಒಂದು ರೀತಿಯಲ್ಲಿ ಕಾಡು ಜನರ ರೀತಿಯಲ್ಲಿ ವರ್ತಿಸಬೇಕು. ಏಕೆಂದರೆ ಅವರು ಕಾಡಿನ ಒಳಗಿದ್ದು, ಕಾಡಿನ ರಕ್ಷಣೆ ಮಾಡ್ತಾರೆ. ಕೆಲವರು ತಮ್ಮ ಅತಿ ಆಸೆಯಿಂದ ಕಾಡಿನ ನಾಶದಲ್ಲಿ ತೊಡಗಿದ್ದಾರೆ. ಅಂತವರನ್ನು ನಾವು ನಿಯಂತ್ರಿಸಬೇಕಿದೆ. ಹಸಿರು ಕ್ಯಾಪ್ ಹಾಕಿದವರು ಒಂದು ರೀತಿಯ ಹಸಿರು ಸೇನೆಯಿದ್ದಂತೆ, ಈ ಸೇನೆ ದೊಡ್ಡದಾಗಬೇಕಿದೆ. ಅದಕ್ಕೆ ಸಾರ್ವಜನಿಕರು ಸಹ ನಮ್ಮೊಂದಿಗೆ ಕೈ ಜೋಡಿಸಬೇಕಿದೆ ಎಂದು ಕರೆ ನೀಡಿದರು.