ಕರ್ನಾಟಕ

karnataka

ETV Bharat / state

ಮೈಸೂರು: ಕಾರಿನ ಗಾಜು ಒಡೆದು 10 ಲಕ್ಷ ರೂ. ದೋಚಿದ ಖದೀಮರು! - ಕಾರಿನ ಗಾಜು ಹೊಡೆದು ಕಳ್ಳತನ

ವಿ.ವಿ‌. ಪುರಂನಲ್ಲಿರುವ ಎಸ್​​ಬಿಐ ಬ್ಯಾಂಕ್ ಮುಂಭಾಗ ಪಿರಿಯಾಪಟ್ಟಣದ ಮನೋಜ್ ಕುಮಾರ್ ಕಾರು ನಿಲ್ಲಿಸಿ ಸ್ಟೇಟ್‌ಮೆಂಟ್ ಪಡೆಯಲು ಬ್ಯಾಂಕ್ ಒಳಗೆ ಹೋದ ಸಂದರ್ಭ, ಕಳ್ಳತನಕ್ಕೆ ಹೊಂಚು ಹಾಕಿದ್ದ ಖದೀಮರು 10 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ.

A thief stole 10 lakh rupees in mysore
ಮೈಸೂರಿನಲ್ಲಿ ಕಾರಿನ ಗಾಜು ಹೊಡೆದು 10 ಲಕ್ಷ ರೂ. ದೋಚಿದ ಖದೀಮರು!

By

Published : Nov 28, 2020, 11:51 AM IST

ಮೈಸೂರು: ಹಾಡಹಗಲೇ ಕಾರಿನ ಗಾಜು (ಕಿಟಕಿ ಗಾಜು) ಒಡೆದು 10 ಲಕ್ಷ ರೂ. ದೋಚಿರುವ ಘಟನೆ ನಡೆದಿದ್ದು, ಖದೀಮರು ಪರಾರಿಯಾಗಿದ್ದಾರೆ.

ಪಿರಿಯಾಪಟ್ಟಣದ ಮನೋಜ್ ಕುಮಾರ್ ಅವರು 10 ಲಕ್ಷ ರೂ. ಕಳೆದುಕೊಂಡು ಪರಿತಪಿಸುವಂತಾಗಿದೆ. ಚಿನ್ನ, ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್​​​, ವ್ಯಾಪಾರಕ್ಕಾಗಿ ಹಣ ಇಟ್ಟುಕೊಂಡು ಮೈಸೂರಿಗೆ ಬಂದಿದ್ದರು.

ಕಾರಿನ ಗಾಜು ಹೊಡೆದು 10 ಲಕ್ಷ ರೂ. ದೋಚಿದ ಖದೀಮರು

ವಿ.ವಿ‌. ಪುರಂನಲ್ಲಿರುವ ಎಸ್​​ಬಿಐ ಬ್ಯಾಂಕ್ ಮುಂಭಾಗ ಕಾರು ನಿಲ್ಲಿಸಿ ಸ್ಟೇಟ್‌ಮೆಂಟ್ ಪಡೆಯಲು ಬ್ಯಾಂಕ್ ಒಳಗೆ ಹೋದ ಸಂದರ್ಭ, ಕಳ್ಳತನಕ್ಕೆ ಹೊಂಚು ಹಾಕಿದ್ದ ಖದೀಮರು 10 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಬ್ಯಾಂಕ್​ನಿಂದ ಸ್ಟೇಟ್​ಮೆಂಟ್ ಪಡೆದು ವಾಪಸ್ ಕಾರಿನ ಬಳಿ ಬಂದು ನೋಡಿದಾಗ, ಗಾಜು ಒಡೆದು ಹಣ ದೋಚಿರುವುದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಯಲ್ಲಾಲಿಂಗ ಮಠದ ಆವರಣದಲ್ಲಿದ್ದ ಹಸಿ ಗಾಂಜಾ ಗಿಡ ವಶಕ್ಕೆ: ಆರೋಪಿ ಪರಾರಿ

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಕುರಿತು ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details