ಮೈಸೂರು: ಕೋವಿಡ್ ವಾರಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ನಗರದ ಡೇರಾ ಸಚ್ಚಾ ಸೌದ ತಂಡದವರು ಪ್ರತಿನಿತ್ಯ ಸೆಲ್ಯೂಟ್ ಹೊಡೆದು ಹಣ್ಣು ಹಂಪಲು, ರೋಗನಿರೋಧಕ ಪಾನೀಯಾಗಳನ್ನು ನೀಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ತಂಡದ ಸದಸ್ಯರ ಕಿಶನ್, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರಂತೆ ಪೊಲೀಸರು ಕೂಡ ಹಗಳಿರುಳೆನ್ನದೆ ಜನರ ಸೇವೆ ಮಾಡುತ್ತಿದ್ದಾರೆ. ಹೀಗಾಗಿ ನಾವು ಅವರಿಗೆ ಸೆಲ್ಯೂಟ್ ಹೊಡೆದು ಹಣ್ಣು, ಹಂಪಲು ವಿತರಿಸುತ್ತಿದ್ದೇವೆ. ಅವರಿಗೆ ಸೆಲ್ಯೂಟ್ ಹೊಡೆಯುವುದರಿಂದ ನಮ್ಮ ಗೌರವವೂ ಹೆಚ್ಚಾಗಲಿದೆ. ಜೊತೆಗೆ ಅವರಿಗೆ ಕರ್ತವ್ಯದ ವೇಳೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ ಎಂದು ಹೇಳಿದ್ದಾರೆ.