ಮೈಸೂರು: ಕೆಲ ಸಂಬಂಧಗಳೇ ಹಾಗೆ ಎಷ್ಟೆ ದೂರವಾದರೂ, ಸಾವನ್ನಪ್ಪಿದರೂ ಮರೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಇಲ್ಲೊಬ್ಬ ಮದುಮಗ ಮೃತಪಟ್ಟ ತನ್ನ ತಂದೆಯ ಬಗ್ಗೆ ಅಪಾರವಾದ ಪ್ರೀತಿಯನ್ನು ಮೆರೆದಿದ್ದಾರೆ. ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಮದುಮಗ ಡಾ.ಯತೀಶ್ ತಮ್ಮ ತಂದೆಯ ಪ್ರತಿರೂಪದ ಪ್ರತಿಮೆಯ ಮುಂದೆ ಮದುವೆ ಮಾಡಿಕೊಳ್ಳುತ್ತಿದ್ದಾರೆ.
ಮೈಸೂರಿನ ಜೆಎಸ್ಎಸ್ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿರುವ ಡಾ.ಯತೀಶ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಜ್ಜಂಪುರ ನಿವಾಸಿ. ಇವರ ತಂದೆ ರಮೇಶ್ ಕಳೆದ ವರ್ಷ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಈಗ ನಂಜನಗೂಡಿನ ಡಾ.ಅಪೂರ್ವ ಜೊತೆ ಯತೀಶ್ ಮದುವೆಯಾಗುತ್ತಿದ್ದಾರೆ. ಶನಿವಾರ ಮದುವೆ ಆರತಕ್ಷತೆ ನಡೆದಿದ್ದು, ರವಿವಾರ ವಿವಾಹ ಸಮಾರಂಭ ಇದೆ.