ಮೈಸೂರು: ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಇನ್ನು ಮುಂದೆ ತಳ್ಳೋಗಾಡಿಯನ್ನು ಕಷ್ಟಪಟ್ಟು ತಳ್ಳುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಚಾರ್ಜಿಂಗ್ ವ್ಯವಸ್ಥೆಯಿಂದ ಸಂಚರಿಸುವ ಹಾಗೆ ಹೊಸ ತಂತ್ರಜ್ಞಾನ ಕಂಡು ಹಿಡಿದ್ದಿದ್ದಾರೆ ಮೈಸೂರಿನ ಯುವಕರು. ಹಾಗಾದರೆ ಈ ಚಾರ್ಜಿಂಗ್ನಿಂದ ಹೇಗೆ ಅದು ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.
ಮನೆ ಮನೆಗೆ ತೆರಳಿ ತಳ್ಳೋಗಾಡಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಮೈಸೂರಿನ ಯುವಕರ ತಂಡ ಎಲೆಕ್ಟ್ರಿಕ್ ಚಾರ್ಜಿಂಗ್ ಅಳವಡಿಸಿ ರಸ್ತೆ ಬದಿಯ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ವಿಶೇಷ ಎಂದರೆ ಇದರಲ್ಲಿ 3 ಚಕ್ರ ಇರಲಿದೆ.
ಎಲೆಕ್ಟ್ರಿಕ್ ವೆಂಡರ್ ಕಾರ್ಟ್ : ಮೂರು ಚಕ್ರದ ಈ ತಳ್ಳೋಗಾಡಿಗೆ ಇ ವಿ ಕಾರ್ಟ್ ಎಂದು ಹೆಸರಿಡಲಾಗಿದ್ದು, ಈ ಇದಕ್ಕೆ ಬ್ಯಾಟರಿ ಅಳವಡಿಸಲಾಗಿದೆ. ಗಾಡಿಯ ಮೇಲೆ ಕುಳಿತು ಸಹ ವ್ಯಾಪರಮಾಡಬಹುದು. ಪ್ರತಿದಿನ 5 ರಿಂದ 6 ಗಂಟೆ ಚಾರ್ಜ್ ಮಾಡಿದರೆ 50 ಕಿ. ಮೀ. ವರೆಗೆ ಇದರಿಂದ ಸಂಚಾರ ಮಾಡಬಹುದು. ಹಾಗೆ ಈ ಗಾಡಿಗೆ 200 ರಿಂದ 250 ಕೆ.ಜಿ ಸರಕುಗಳನ್ನು ಹೊರುವ ಸಾಮರ್ಥ್ಯ ಇದೆ. ತಳ್ಳೋಗಾಡಿಗೆ ಸೈಕಲ್ ಹ್ಯಾಂಡ್ ಅಳವಡಿಸಲಾಗಿದ್ದು, ಅದರಲ್ಲಿ ಎಕ್ಸಲೇಟರ್ ಸಹ ಇದೆ. ಈ ಮೂಲಕ ತುಂಬಾ ಸ್ಮಾರ್ಟ್ ಆಗಿ ರೂಪುಗೊಳಿಸಲಾಗಿದೆ.