ಮೈಸೂರು:ಮಹಾಲಯ ಅಮಾವಾಸ್ಯೆ ನಿಮಿತ್ತ ನಾಲೆಯೊಂದರಲ್ಲಿ ತನ್ನ ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಗೆ ಏಕಾಏಕಿ ಬಂದ ಮತ್ತೊಂದು ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕರಿಗಾಳ ಗ್ರಾಮದಲ್ಲಿ ನಡೆದಿದೆ.
ಆಟೋಗಳ ಡಿಕ್ಕಿ; ಚಾಲಕನ ಬಾಳಿಗೆ ಕತ್ತಲಾದ ಮಹಾಲಯ ಅಮಾವಾಸ್ಯೆ! - Mysore auto accident
ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಗೆ ಯಮಸ್ವರೂಪಿಯಂತೆ ಬಂದ ಮತ್ತೊಂದು ಗೂಡ್ಸ್ ಆಟೋ ಡಿಕ್ಕಿ ಹೊಡೆದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕರಿಗಾಳ ಗ್ರಾಮದಲ್ಲಿ ನಡೆದಿದೆ.
ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಬಿದ್ದ ಆಟೋಗಳು
ಪುಟ್ಟರಾಜು (40) ಮೃತ ವ್ಯಕ್ತಿ. ಅಮಾವಾಸ್ಯೆ ನಿಮಿತ್ತ ನಾಲೆಯಲ್ಲಿ ಆಟೋ ನಿಲ್ಲಿಸಿ ಅದನ್ನು ಸ್ವಚ್ಛಗೊಳಿಸುತ್ತಿದ್ದ. ಈ ವೇಳೆ ಇದ್ದಕ್ಕಿಂದ್ದಂತೆ ಯಮಸ್ವರೂಪಿಯಂತೆ ಬಂದ ಮತ್ತೊಂದು ಗೂಡ್ಸ್ ಆಟೋ ಈತನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ಆಟೋಗಳು ಪಲ್ಟಿಯಾಗಿವೆ. ಘಟನೆಯಲ್ಲಿ ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿ ಪುಟ್ಟರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.
ಗೂಡ್ಸ್ ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.