ಕರ್ನಾಟಕ

karnataka

ETV Bharat / state

ಸ್ಥಳಕ್ಕೆ ಬಂದು ಕೆಟ್ಟು ನಿಂತ ಆ್ಯಂಬುಲೆನ್ಸ್​... ಹಾರಿ ಹೋಯ್ತು ವೃದ್ಧೆಯ ಪ್ರಾಣ - ಆ್ಯಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ವೃದ್ಧೆ ಸಾವು

ಲೋ ಬಿಪಿಯಾಗಿ ಕುಸಿದು ಬಿದ್ದ ವೃದ್ಧೆಯನ್ನು ಚಿಕಿತ್ಸೆಗಾಗಿ ಕರೆದೊಯ್ಯಲು ಬಂದ 108 ಆ್ಯಂಬ್ಯುಲೆನ್ಸ್ ಸ್ಥಳಕ್ಕಾಗಮಿಸಿ ಕೆಟ್ಟು ನಿಂತ ಪರಿಣಾಮ ವೃದ್ಧೆ ಸರಿಯಾದ ಸಮಯಕ್ಕೆ ಆಸ್ಪತ್ರೆ ಸೇರದೆ ಮೃತಪಟ್ಟಿರುವ ಘಟನೆ ನಡೆದಿದೆ.

mysore
ಆ್ಯಂಬುಲೆನ್ಸ್

By

Published : Dec 28, 2020, 10:50 PM IST

ಮೈಸೂರು: ಲೋ ಬಿಪಿಯಾಗಿ ಕುಸಿದು ಬಿದ್ದ ವೃದ್ಧೆಯನ್ನು ಕರೆದುಕೊಂಡು ಹೋಗಲು ಬಂದ ಆ್ಯಂಬ್ಯುಲೆನ್ಸ್ ಸ್ಥಳಕ್ಕಾಗಮಿಸಿ ಕೆಟ್ಟು ನಿಂತ ಪರಿಣಾಮ ವೃದ್ಧೆಯ ಪ್ರಾಣ ಪಕ್ಷಿ ಹಾರಿಹೋಗಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.

ಕೆಟ್ಟು ನಿಂತ ಆ್ಯಂಬುಲೆನ್ಸ್

ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿ ಗ್ರಾಮದ ಬೋರಮ್ಮ(55) ಮೃತ ವೃದ್ಧೆ. ಲೋ ಬಿಪಿಯಾಗಿ ಕುಸಿದು ಬಿದ್ದ ವೃದ್ಧೆಯನ್ನು ಚಿಕಿತ್ಸೆಗಾಘಿ ಕರೆದೊಯ್ಯಲು 108 ಆ್ಯಂಬುಲೆನ್ಸ್​ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ವೃದ್ಧೆ ಕರೆದೊಯ್ಯಲು ಸ್ಥಳಕ್ಕಾಗಮಿಸಿ 108 ವಾಹನ ಕೆಟ್ಟು ನಿಂತಿದೆ‌.

ಬಳಿಕ ಖಾಸಗಿ ವಾಹನದಲ್ಲಿ ವೃದ್ಧೆಯನ್ನು ಕುಟುಂಬಸ್ಥರು ಮಂಡ್ಯದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕೆಟ್ಟು ನಿಂತ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾಋಎ. ಅಲ್ಲದೆ ಆರೋಗ್ಯ ಇಲಾಖೆಯು ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈ ರೀತಿ ಅನಾಹುತವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details