ಮೈಸೂರು:ಮೈಸೂರಿನಲ್ಲಿ ದೇವಸ್ಥಾನ ತೆರವು ವಿಚಾರವಾಗಿ ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್ ಬಂದಿದೆ ಎಂದು ಜಿಲ್ಲಾಧಿಕಾರಿ ಗೌತಮ್ ಬಗಾದಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಹಾಗೂ ತಹಶೀಲ್ದಾರ್ಗೆ ನೋಟಿಸ್ ಬಂದಿದೆ ಎಂದಿದ್ದಾರೆ.
ಆ ನೋಟಿಸ್ಗೆ ಉತ್ತರವನ್ನು ಕೊಡುತ್ತೇವೆ. ಅದೇ ಸರ್ಕಾರದ ಅಧಿಕೃತ ನೋಟಿಸ್ ಆಗಿದೆ. ನೋಟಿಸ್ನಲ್ಲಿ ಏನಿದೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಆದರೆ, ಸರ್ಕಾರಕ್ಕೆ ಸಂಪೂರ್ಣ ವಿವರ ನೀಡುತ್ತೇವೆ ಎಂದರು.