ಮೈಸೂರು: BEML(ಬೆಮಲ್) ಕಂಪನಿಯ ಆವರಣದಲ್ಲಿ ತಾಯಿ ಚಿರತೆ ಮತ್ತು 4 ಮರಿಗಳು ರಾತ್ರಿ ವೇಳೆ ಓಡಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಮೈಸೂರು ಬೆಮಲ್ ಆವರಣದಲ್ಲಿ ತಾಯಿ ಮತ್ತು 4 ಚಿರತೆ ಮರಿಗಳ ಓಡಾಟ: ವಿಡಿಯೋ - ಬೆಮಲ್ ಆವರಣದಲ್ಲಿ ತಾಯಿ ಮತ್ತು 4 ಚಿರತೆ ಮರಿಗಳ ಓಡಾಟ,
BEML(ಬೆಮಲ್)ನ ಆವರಣದಲ್ಲಿ ಕಿರು ಅರಣ್ಯವಿರುವ ಕಾರಣ ಇಲ್ಲಿ ಚಿರತೆಯ ಓಡಾಟ ಸಾಮಾನ್ಯವಾಗಿದೆ. ಆದರೆ ಇಲ್ಲಿನ ಚಿರತೆಗಳು ಯಾವುದೇ ರೀತಿಯ ತೊಂದರೆ ಮಾಡಿಲ್ಲ ಎಂದು ಡಿಸಿಎಫ್ ಪ್ರಶಾಂತ್ ತಿಳಿಸಿದ್ದಾರೆ.

ನಗರದ ಹೊರ ವಲಯದಲ್ಲಿರುವ ಕೇಂದ್ರ ಸರ್ಕಾರದ ಬೆಮಲ್ ಕಂಪನಿಯ ಆವರಣದಲ್ಲಿ ತಾಯಿ ಚಿರತೆ ತನ್ನ 4 ಮರಿಗಳೊಂದಿಗೆ ಕಬ್ಬಿಣದ ಕಾಂಪೌಂಡ್ ಅನ್ನು ದಾಟಲು ಪ್ರಯತ್ನಿಸುತ್ತಿದ್ದವು. ಈ ವೇಳೆ ತಾಯಿ ಚಿರತೆ ಸರಾಗವಾಗಿ ಕಾಂಪೌಂಡ್ ಹತ್ತಿ ಹೋಗಿದೆ. ಆದರೆ ಮರಿಗಳು ಹತ್ತಲು ಸಾಧ್ಯವಾಗದೇ ಅಲ್ಲಿಯೇ ಓಡಾಟ ನಡೆಸಿದ್ದು, ಅದರಲ್ಲಿ ಒಂದು ಮರಿ ಮಾತ್ರ ಕಷ್ಟಪಟ್ಟು ಹತ್ತಿ ಕೆಳಗಿಳಿಯಲು ಆಗದೇ, ತಡೆಗೋಡೆ ಮೇಲೆ ಕುಳಿತ ದೃಶ್ಯವನ್ನು ಮೊಬೈಲ್ನಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ.
BEML(ಬೆಮಲ್)ನ ಆವರಣದಲ್ಲಿ ಕಿರು ಅರಣ್ಯವಿರುವ ಕಾರಣ ಇಲ್ಲಿ ಚಿರತೆಯ ಓಡಾಟ ಸಾಮಾನ್ಯವಾಗಿದೆ. ಆದರೆ ಇಲ್ಲಿನ ಚಿರತೆಗಳು ಯಾವುದೇ ರೀತಿಯ ತೊಂದರೆ ಮಾಡಿಲ್ಲ ಎಂದು ಡಿಸಿಎಫ್ ಪ್ರಶಾಂತ್ ತಿಳಿಸಿದ್ದಾರೆ.