ಮೈಸೂರು: ಅಮ್ಮನ ಸಲುಗೆ, ಪ್ರೀತಿ, ಮಮಕಾರವೇ ಹಾಗೇ.. ಕಂದನ ಏನೇ ಚೇಷ್ಟೆ ಕುಚೇಷ್ಟೆ ಮಾಡಿದ್ರೂ ಅದನ್ನು ನೋಡುತ್ತ ವಾತ್ಸಲ್ಯದ ವಾತಾವರಣ ಸೃಷ್ಟಿಸುತ್ತಾಳೆ ಕರುಣಾಮಯಿ.
ವ್ಯಾಘ್ರನೆದೆಯಲ್ಲಿ ಉಕ್ಕಿದ ತಾಯಿ ಪ್ರೇಮ: ಮರಿ ಹುಲಿಯ ಸಿಹಿ ಮುತ್ತು, ಬಿಗಿ ಅಪ್ಪುಗೆ ಫೋಟೊ ವೈರಲ್ - kannadanews
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಸಫಾರಿ ವಲಯದಲ್ಲಿ ಹುಲಿಮರಿಯೊಂದು ತನ್ನ ತಾಯಿ ಹುಲಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಸಿಹಿ ಮುತ್ತನ್ನು ಕೊಡುತ್ತಿರುವ ಅಪರೂಪದ ಫೋಟೋ ವೈರಲ್ ಆಗಿದೆ.
ತಾಯಿಯನ್ನು ಅಪ್ಪಿ ಮುತ್ತಿಟ್ಟ ಮರಿ ಹುಲಿ
ಹೌದು, ನಾಗರಹೊಳೆ(ರಾಜೀವ್‌ಗಾಂಧಿ) ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಸಫಾರಿ ವಲಯದಲ್ಲಿ ಬೇಟೆ ಹೋಗಿ ಬಂದ ತಾಯಿ ಹುಲಿ, ವಾಪಸ್ ತನ್ನ ಅವಾಸ ಸ್ಥಳದ ಹತ್ತಿರ ಬರುತ್ತಿದ್ದಂತೆ ಚೆಂಗನೆ ಮರಿ ಹುಲಿ, ಪ್ರೀತಿಯಿಂದ ಅಪ್ಪಿಕೊಂಡು ಸಿಹಿ ಮುತ್ತನ್ನು ಕೊಡುತ್ತಿರುವ ಅಪರೂಪದ ಫೋಟೋವನ್ನು ಪ್ರವಾಸಿಗರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ಧಾರೆ. ತಾಯಿ ಹುಲಿಯನ್ನು ಬಿಗಿದ್ದಪ್ಪಿಕೊಂಡು ಮರಿಹುಲಿ ಸಿಹಿ ಮುತ್ತು ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗಿದೆ.
Last Updated : Jul 2, 2019, 1:00 PM IST