ಕರ್ನಾಟಕ

karnataka

ETV Bharat / state

ರೇವಣ್ಣ ನಿಂಬೆ ಹಣ್ಣು ವರ್ಕೌಟ್​ ಆಗ್ಲಿಲ್ಲ : ಎ ಮಂಜು ವ್ಯಂಗ್ಯ - ಚಾಮುಂಡೇಶ್ವರಿ ದೇವಾಲಯ

ಚಾಮುಂಡಿ ತಾಯಿಯ ವರ್ಧಂತಿ ನಿಮಿತ್ತ ಬೆಟ್ಟಕ್ಕೆ ಆಗಮಿಸಿದ ಮಾಜಿ ಸಚಿವ ಎ. ಮಂಜು ಪೂಜೆ ನಂತರ ಮಾತನಾಡಿ, ದೇವರು ಎಲ್ಲರಿಗೂ ಒಬ್ಬನೇ, ಆದರೆ, ಹೆಚ್.ಡಿ.ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು, ಬರಿಕಾಲಿನಲ್ಲಿ ದೇವಸ್ಥಾನ ಹಾಗೂ ವಿಧಾನಸೌಧದಲ್ಲಿ ತಿರುಗಾಡಿದರು, ರೇವಣ್ಣರ ನಿಂಬೆಹಣ್ಣು ವರ್ಕೌಟ್ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ಎ.ಮಜು, ಮಾಜಿ ಶಾಸಕ

By

Published : Jul 24, 2019, 1:14 PM IST

ಮೈಸೂರು:ರೇವಣ್ಣ ಅವರ ನಿಂಬೆಹಣ್ಣು ಕೆಲಸ ಮಾಡಲಿಲ್ಲ ಎಂದು ಬಿಜೆಪಿ ಮುಖಂಡ ಎ ಮಂಜು ವ್ಯಂಗ್ಯವಾಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ದೇವಸ್ಥಾನಕ್ಕೆ ಬಂದಿರುವುದು ರಾಜ್ಯ ಸುಗಮವಾಗಿರಲಿ ಎಂದು ಮತ್ತು ರಾಜ್ಯದ ಜನರು ಕ್ಷೇಮವಾಗಿಲಿ ಅಂತ ಮಂಜು ತಿಳಿಸಿದರು.

ರೇವಣ್ಣನ ನಿಂಬೆ ಹಣ್ಣು ವರ್ಕೌಟ್​ ಆಗ್ಲಿಲ್ಲ

ಇಂದು ಚಾಮುಂಡಿ ತಾಯಿಯ ವರ್ಧಂತಿಯ ನಿಮಿತ್ತ ಬೆಟ್ಟಕ್ಕೆ ಆಗಮಿಸಿದ ಮಾಜಿ ಸಚಿವ ಎ. ಮಂಜು ಪೂಜೆ ನಂತರ ಮಾತನಾಡಿ, ದೇವರು ಎಲ್ಲರಿಗೂ ಒಬ್ಬನೇ. ಆದರೆ ಹೆಚ್.ಡಿ.ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು, ಬರಿಕಾಲಿನಲ್ಲಿ ದೇವಸ್ಥಾನ ಹಾಗೂ ವಿಧಾನಸೌಧದಲ್ಲಿ ತಿರುಗಾಡಿದರು. ರೇವಣ್ಣರ ನಿಂಬೆಹಣ್ಣು ವರ್ಕೌಟ್ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ, ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಬರಲಿ ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ABOUT THE AUTHOR

...view details