ಮೈಸೂರು: ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಮಾವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ.
ನಗರದ ಗೌಸಿಯಾನಗರದ ನಿವಾಸಿಯಾದ ಸಲೀಂ (40) ಕೊಲೆಯಾದ ವ್ಯಕ್ತಿಯಾಗಿದ್ದು , ಈತ ತನ್ನ ಮಗಳನ್ನು 5 ವರ್ಷಗಳ ಹಿಂದೆನದೀಮ್ ಮಹಮ್ಮದ್ ಖಾನ್ಗೆ ಕೊಟ್ಟು ಮದುವೆ ಮಾಡಿದ್ದರು. ಮಗಳು ಅಳಿಯನ ನಡುವೆ ಕೆಲವು ತಿಂಗಳಿಂದ ಜಗಳ ನಡೆಯುತ್ತಿದ್ದು, ಜಗಳ ನಡೆದಾಗಲೆಲ್ಲಾ ಸಲೀಂ ಮಗಳ ಮನೆಗೆ ಬಂದು ರಾಜಿ ಮಾಡುತ್ತಿದ್ದರು.