ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಬೆಂಬಲಿಗರು ಗ್ರಾಮದ ಮತ್ತೊಂದು ಕೋಮಿನ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಮಾರಶೆಟ್ಟಹಳ್ಳಿಯಲ್ಲಿ ನಡೆದಿದೆ.
ಗ್ರಾಪಂ ಫಲಿತಾಂಶ: ಸೋತವನಿಂದ ಗೆದ್ದವನ ಮೇಲೆ ಮಾರಣಾಂತಿಕ ಹಲ್ಲೆ - mysuru news
ಸೋಲನ್ನು ಸಹಿಸದೇ, ನನಗೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕೆ ಮನೆಯ ಬಳಿ ನಿಂತಿದ್ದ ಗೆದ್ದ ಅಭ್ಯರ್ಥಿ ಮೇಲೆ ಸೋತವನ ಮಗ ಸಂದೇಶ ಹಾಗೂ ಬೆಂಬಲಿಗರಾದ ಪ್ರಕಾಶ, ರಂಗಸ್ವಾಮಿ, ಪ್ರದೀಪ್ ಎಂಬುವರು ದೊಣ್ಣೆ, ರಾಡಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಸೋತವನಿಂದ ಗೆದ್ದವನ ಮಾರಣಾಂತಿಕ ಮೇಲೆ ಹಲ್ಲೆ
ಗ್ರಾಮದ ಚೆನ್ನಬಸವಣ್ಣ ಹಲ್ಲೆಗೊಳಗಾದವರು. ಗ್ರಾಮದ ರಂಗಪ್ಪ ಎಂಬುವವರು ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತಮ್ಮ ಪ್ರತಿಸ್ಪರ್ಧಿ ಸದಾನಂದ ವಿರುದ್ಧ ಸೋಲನುಭವಿಸಿದ್ದರು. ಆದರೆ, ಸೋಲನ್ನು ಸಹಿಸದೇ, ನಮಗೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕೆ ಮನೆಯ ಬಳಿ ನಿಂತಿದ್ದ ಚೆನ್ನಬಸವಣ್ಣ ಅವರ ಮೇಲೆ ರಂಗಪ್ಪನ ಮಗ ಸಂದೇಶ, ಬೆಂಬಲಿಗರಾದ ಪ್ರಕಾಶ, ರಂಗಸ್ವಾಮಿ, ಪ್ರದೀಪ್ ದೊಣ್ಣೆ, ರಾಡಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಮಾರಣಾಂತಿಕ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಬಸವಣ್ಣ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.