ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಧರೆಗುರುಳಿದ ಬೃಹತ್ ಮರ: ಮೂರು ಕಾರುಗಳು ಜಖಂ - huge tree that fell to the ground

ಬೃಹತ್ ಗಾತ್ರದ ಮರವೊಂದು ಧರೆಗುರುಳಿದ್ದರಿಂದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಮೂರು ಕಾರುಗಳು ಜಖಂ ಆಗಿವೆ. ಅದೃಷ್ಟವಶಾತ್ ಸಾರ್ವಜನಿಕರ ಓಡಾಟ ಇಲ್ಲದೇ ಇದ್ದುದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

car-damage
ಕಾರು ಜಖಂ

By

Published : Nov 18, 2020, 11:46 AM IST

ಮೈಸೂರು: ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದ ಪರಿಣಾಮ, ಮೂರು ಕಾರುಗಳು ಜಖಂ‌ ಆಗಿರುವ ಘಟನೆ ನಗರದ ಕೆ.ಆರ್. ಮೊಹಲ್ಲಾದ ರಾಮವಿಲಾಸ ರಸ್ತೆಯಲ್ಲಿ ನಡೆದಿದೆ.

ಪಾರ್ಕಿಂಗ್ ಸ್ಥಳದಲ್ಲಿ ಈ ಅವಘಡ ಸಂಭವಿಸಿದ್ದು, ‌ಅದೃಷ್ಟವಶಾತ್ ಸಾರ್ವಜನಿಕರ ಓಡಾಟ ಇಲ್ಲದ್ದರಿಂದ ಅನಾಹುತ ತಪ್ಪಿದೆ.

ಧರೆಗೆ ಉರುಳಿದ ಬೃಹತ್ ಮರ

ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ರಾಮವಿಲಾಸ ರಸ್ತೆಯಲ್ಲಿನ ಸಂಚಾರ ಬಂದ್ ಮಾಡಿಸಿದ್ದರು. ಮರ ತೆರವು ಕಾರ್ಯಾಚರಣೆ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ABOUT THE AUTHOR

...view details