ಮೈಸೂರು: ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ, ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಸೂರಿನ ಸುಣ್ಣದಕೇರಿಯಲ್ಲಿ ಮಳೆ ಅಬ್ಬರಕ್ಕೆ ಮನೆಕುಸಿತ - house collapsed in mysore sunnadakeri
ಮೈಸೂರಿನಲ್ಲಿ ನಿರಂತರವಾಗಿ ಸುರಿಯುತ್ತಿದ್ದು ಸುಣ್ಣದ ಕೇರಿಯಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.
rain
ನಗರದ ಸುಣ್ಣದಕೇರಿ ನಿವಾಸಿ ಶಿವಪ್ರಸಾದ್ ಎಂಬುವರಿಗೆ ಸೇರಿದ ಮನೆ ಮಂಗಳವಾರ ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಕುಸಿದು ಬಿದ್ದದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆ ಕುಸಿದಿರುವ ಬಗ್ಗೆ ಅಕ್ಕಪಕ್ಕದ ನಿವಾಸಿಗಳು ಮನೆ ಮಾಲೀಕನಿಗೆ ವಿಷಯ ತಿಳಿಸಿ, ನಂತರ ನಗರ ಪಾಲಿಕೆ ಕಂಟ್ರೋಲ್ ರೂಂಗೆ ಮಾಡಿ ವಿಷಯ ತಿಳಿಸಿದ್ದಾರೆ.
ನಗರ ಪಾಲಿಕೆಗೆ ವಿಷಯ ಮುಟ್ಟಿಸಿದರು ಅಧಿಕಾರಿಗಳು ಪರಿಶೀಲನೆ ನಡೆಸಲು ಇತ್ತ ಬಾರದೇ ಇರುವುದು ಸ್ಥಳೀಯರಲ್ಲಿ ಅಸಮಧಾನ ಮೂಡಿಸಿದೆ.