ಕರ್ನಾಟಕ

karnataka

ETV Bharat / state

ಎಷ್ಟೇ ಅಭಿವೃದ್ಧಿ ಮಾಡಿದರೂ ಹೆಬ್ಬಾಳು ಕೆರೆ ಖಾಲಿ ಖಾಲಿ!

ಬೇಸಿಗೆಯಯಿಂದ ಹಲವು ಕೆರೆಗಳು ಬತ್ತಿಹೋಗುತ್ತಿವೆ. ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮಿಕಾಂತ ದೇವಸ್ಥಾನದ ಕಲ್ಯಾಣಿಯೆಂದೇ ಖ್ಯಾತಿಗಳಿಸಿರುವ 'ಹೆಬ್ಬಾಳು ಕೆರೆ' ಕೂಡ ಬರಡಾಗುತ್ತಿದೆ.

ನೀರಿಲ್ಲದೆ ಸೋರಗುತ್ತಿರುವ ಹೆಬ್ಬಳು ಕೆರೆ

By

Published : May 3, 2019, 5:56 AM IST

ಮೈಸೂರು: ಇನ್ಫೋಸಿಸ್​ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರ ಕಾಳಜಿಯಿಂದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಕೆರೆಗೆ ಮರುಜೀವ ಬಂದಿತ್ತು. ಆದರೆ ಬೇಸಿಗೆ ಹಾಗೂ ಅಂತರ್ಜಲ ಕಡಿಮೆಯಾಗಿ ನೀರಿಲ್ಲದೆ ಕೆರೆ ಖಾಲಿ ಖಾಲಿಯಾಗಿದೆ.

ನೀರಿಲ್ಲದೆ ಸೋರಗುತ್ತಿರುವ ಹೆಬ್ಬಳು ಕೆರೆ

ಹೌದು, ಬೇಸಿಗೆಯ ಬಿಸಿಲಿನಿಂದ ಕೆರೆಗಳಲ್ಲಿರುವ ನೀರು ಆವಿಯಾಗುತ್ತಿರುವ ಜೊತೆಗೆ ಹಲವಾರು ಕೆರೆಗಳು ಬತ್ತಿಹೋಗಿವೆ. ಈ ನಡುವೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮಿಕಾಂತ ದೇವಸ್ಥಾನದ ಕಲ್ಯಾಣಿಯೆಂದೇ ಖ್ಯಾತಿಗಳಿಸಿರುವ 'ಹೆಬ್ಬಾಳು ಕೆರೆ' ಬೇಸಿಗೆಯಿಂದ ಬರಡಾಗುತ್ತಿದೆ. ಕೆರೆಯ ಸೌಂದರ್ಯ ನೋಡಿದ ಇನ್​ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಇಷ್ಟೊಂದು ಸೊಗಸಾಗಿದೆ ಎಂದುಕೆರೆಯ ಅಭಿವೃದ್ಧಿಗೆ ಲಕ್ಷ ದೇಣಿಗೆ ನೀಡಿದ್ದರು. ಆದ್ರೆ ಇದೀಗ ಬೇಸಿಗೆಯಿಂದ ಕೆರೆ ಬತ್ತಿ ಹೋಗುತ್ತಿದ್ದು, ಪಾಚಿ ಬೆಳೆಯುತ್ತಿದೆ.

ಮಳೆ ನೀರು ಕೆರೆಯಲ್ಲಿಯೇ ಸಂರಕ್ಷಣೆಯಾಗುವಂತೆ ಅಧಿಕಾರಿಗಳು ಹೊಸ ಆಲೋಚನೆ ಮಾಡಿದ್ರೆ ಹೆಬ್ಬಾಳಿನ ಕೈಗಾರಿಕಾ ಪ್ರದೇಶಕ್ಕೆ ಮತ್ತಷ್ಟು ಸೌಂದರ್ಯ ಬರುತ್ತದೆ.

For All Latest Updates

TAGGED:

ABOUT THE AUTHOR

...view details