ಕರ್ನಾಟಕ

karnataka

ETV Bharat / state

ಪೌರಕಾರ್ಮಿಕನ ಗೃಹಪ್ರವೇಶಕ್ಕೆ ಬಂದು ಶುಭಕೋರಿದ ಹ್ಯಾಟ್ರಿಕ್ ಹೀರೋ - undefined

ಮೈಸೂರಿನ ಅಶೋಕಪುರಂನಲ್ಲಿರುವ ಪೌರಕಾರ್ಮಿಕ ಮಾರ ಅವರ ಮನೆ ಗೃಹಪ್ರವೇಶಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಅವರು ಹೋಗಿ ಶುಭ ಹಾರೈಸಿದ್ದಾರೆ.

ಮನೆಯ ಹೆಂಗಳೆಯರು ಶಿವಣ್ಣ ಅವರಿಗೆ ಆರತಿ ಬೆಳಗಿ ಸ್ವಾಗತ ಕೋರಿದರು.

By

Published : Jun 30, 2019, 12:59 PM IST

ಮೈಸೂರು: ಇಲ್ಲಿನ ಅಶೋಕಪುರಂನ ಪೌರಕಾರ್ಮಿಕರ ಕಾಲೋನಿಯಲ್ಲಿ ಭಾನುವಾರ ಹಬ್ಬದ ವಾತಾವರಣ ಮನೆ ಮಾಡಿತ್ತು.

ಪೌರಕಾರ್ಮಿಕರ ಕಾಲೋನಿಯಲ್ಲಿ ಪೌರಕಾರ್ಮಿಕರೊಬ್ಬರ ಗೃಹಪ್ರವೇಶಕ್ಕೆ ಶುಭಕೋರಲು ಆಗಮಿಸಿದ ನಟ ಶಿವರಾಜ್ ಕುಮಾರ್ ಅವರಿಗೆ ಮನೆಯ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.

ಪೌರಕಾರ್ಮಿಕನ ಗೃಹಪ್ರವೇಶಕ್ಕೆ ಹೋಗಿ ಶುಭಕೋರಿದ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​

ಮನೆಯೊಳಗೆ ಹೋದ ಶಿವರಾಜ್ ಕುಮಾರ್, ದೇವರಿಗೆ ಪೂಜೆ ಸಲ್ಲಿಸಿ ಮನೆ ಮಂದಿಗೆಲ್ಲಾ ಸಿಹಿ ಹಂಚಿದರು.ಇದರ ನಡುವೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಂತೆ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಮನೆಗೆ ಗೃಹಪ್ರವೇಶ ಗುರುವಾರ ನಿಗದಿಯಾಗಿದ್ದು, ಆದರೆ ಅಂದು ಬರಲಾಗಲಿಲ್ಲ.ಆದರಿಂದ ಇಂದು ಬಂದು ಶುಭಕೋರಿದ್ದಿನಿ ಎಂದರು.

ಮನೆ ಮಾಲೀಕ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಎನ್​. ಮಾರ ಮಾತನಾಡಿ, ಗೃಹಪ್ರವೇಶಕ್ಕೆ ಒಂದು ತಿಂಗಳ ಹಿಂದೆ ಆಹ್ವಾನ ನೀಡಿದ್ದೆ. ಆದರೆ ಗುರುವಾರ ಬರಲು ಆಗಲಿಲ್ಲ. ಶಿವರಾಜ್​ಕುಮಾರ್ ಅವರು ಬರುವ ಬಗ್ಗೆ ಅನುಮಾನವಿತ್ತು. ಇಂದು ಬಂದು ಶುಭಕೋರಿದ್ದಾರೆ. ಅವರ ಸರಳತೆ ನೋಡಿ ತುಂಬ ಖುಷಿಯಾಗಿದೆ ಎಂದು ಖುಷಿ ಪಟ್ಟರು.

For All Latest Updates

TAGGED:

ABOUT THE AUTHOR

...view details