ಕರ್ನಾಟಕ

karnataka

ETV Bharat / state

ಮೈಸೂರು: ಸ್ನೇಹಿತರ ಜೊತೆ ಸೇರಿ ಮಾಜಿ ಲವ​ರ್​ ಮೇಲೆ ಯುವತಿಯಿಂದ ಮಾರಣಾಂತಿಕ ಹಲ್ಲೆ! - assaulted a ex lover

ತನ್ನ ‌ಜೊತೆಯಲ್ಲಿದ್ದುಕೊಂಡೇ ಚೇತನ್‌ ಜೊತೆ ಭೂಮಿಕಾ‌ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಉಮೇಶ್‌ಕುಮಾರ್ ಭೂಮಿಕಾ‌ಳ ಸ್ನೇಹಿತೆ ನಿಖಿತಾಳನ್ನು ಮದುವೆಯಾಗಿದ್ದಾನೆ. ಬಳಿಕ ಭೂಮಿಕಾ‌ ಹಾಲಿ ಪ್ರಿಯತಮನ ಜೊತೆ ಸೇರಿ ಮಾಜಿ ಪ್ರಿಯಕರನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.

A Lady has assaulted a ex lover at mysore
ಮೈಸೂರು: ಸ್ನೇಹಿತರ ಜೊತೆಗೂಡಿ ಮಾಜಿ ಪ್ರಿಯಕರನ ಮೇಲೆ ಹಲ್ಲೆ ನಡೆಸಿದ ಪ್ರಿಯತಮೆ

By

Published : Sep 23, 2020, 12:16 PM IST

ಮೈಸೂರು: ತನಗೆ ಕೈಕೊಟ್ಟು ಸ್ನೇಹಿತೆಯನ್ನು ಮದುವೆಯಾದ ಯುವಕನ ಮೇಲೆ ಮಾಜಿ ಪ್ರಯತಮೆ ಮತ್ತು ಆಕೆಯ ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಪ್ರಕರಣ ನಗರದಲ್ಲಿ ನಡೆದಿದೆ. ಹಾಲಿ ಪ್ರಿಯತಮನ ಜೊತೆ ಸೇರಿಕೊಂಡು ಮಾಜಿ ಪ್ರಿಯಕರನ ಕೊಲೆಗೆ ಯುವತಿ ಯತ್ನಿಸಿರುವ ಆರೋಪ ಕೇಳಿಬಂದಿದೆ.

ಮೈಸೂರಿನ ಅಗ್ರಹಾರ ನಿವಾಸಿ ಉಮೇಶ್‌ಕುಮಾರ್ ಹಲ್ಲೆಗೊಳಗಾದವರು, ಈತನಿಗೆ ವೈದ್ಯರು ಬರೋಬ್ಬರಿ 80 ಹೊಲಿಗೆ ಹಾಕಿದ್ದಾರೆ. ಮಾಜಿ ಪ್ರಿಯತಮೆ ಭೂಮಿಕಾ ಹಾಗೂ ಈಕೆಯ ಸಹಚರರಾದ ಚೇತನ್, ಅಭಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಪ್ರಿಯಕರನ ಮೇಲೆ ಹಲ್ಲೆ ನಡೆಸಿದ ಪ್ರಿಯತಮೆ!

ಉಮೇಶ್‌ ಕಳೆದ ಮೂರು ವರ್ಷಗಳಿಂದ ಭೂಮಿಕಾ ಜೊತೆ ಲೀವಿಂಗ್ ಟುಗೆದರ್‌ ಇದ್ದ. ಉಮೇಶ್‌ ‌ಜೊತೆಯಲ್ಲಿದ್ದುಕೊಂಡೇ ಚೇತನ್‌ ಜೊತೆ ಭೂಮಿಕಾ‌ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗ್ತಿದೆ. ಇದರಿಂದ ಬೇಸರಗೊಂಡ ಉಮೇಶ್ ಭೂಮಿಕಾಳನ್ನು ದೂರ ಮಾಡಿ, ಆ.31 ರಂದು ನಿಖಿತಾಳನ್ನು ಮದುವೆಯಾಗಿದ್ದ.

ನಿಖಿತಾ, ಭೂಮಿಕಾ, ಯಶಸ್ವಿನಿ ಮೂವರು ಗೆಳತಿಯರು. ‌ಈ ಮೂವರಲ್ಲಿ ಆದಾಯದ ಮೂಲವಾಗಿದ್ದ ಶ್ರೀಮಂತ ಸ್ನೇಹಿತೆ ನಿಖಿತಾಳನ್ನು ದೂರ ಮಾಡಿದ್ದಕ್ಕೆ ಯಶಸ್ವಿನಿ ಸಿಟ್ಟಿಗೆದ್ದಿದ್ದಳು. ಯಶಸ್ವಿನಿ ಜೊತೆ ಭೂಮಿಕಾ ಕೈಜೋಡಿಸಿ, ಪಾರ್ಟಿ ಕೊಡುವ ನೆಪದಲ್ಲಿ ಕಳೆದ ವಾರ ಉಮೇಶ್ ಹಾಗೂ ನಿಖಿತ ದಂಪತಿಯನ್ನ ಕರೆಸಿ ಹಲ್ಲೆ ನಡೆಸಿದ್ದು, ಈ ವಿಡಿಯೋವನ್ನು ಭೂಮಿಕಾ, ಯಶಸ್ವಿನಿ ವೈರಲ್ ಮಾಡಿದ್ದರು.

ಇದರಿಂದ ಕೆರಳಿದ ಉಮೇಶ್, ವಿಡಿಯೋ ಡಿಲಿಟ್ ಮಾಡುವಂತೆ ಇಬ್ಬರಿಗೂ ಅವಾಜ್ ಹಾಕಿದ್ದಾನೆ. ಇದಕ್ಕೆ ಪ್ರತಿಯಾಗಿ ಭೂಮಿಕಾ ಉಮೇಶ್‌ಗೆ ಕಾಲ್ ಮಾಡಿ ಅವಾಜ್ ಹಾಕಿದ್ದಳು ಎನ್ನಲಾಗ್ತಿದೆ. ನಂತರ, ಮೈಸೂರಿನ ರಾಮಸ್ವಾಮಿ ಸರ್ಕಲ್‌ಗೆ ಕರೆಯಿಸಿ ಉಮೇಶ್​​ಗೆ ಲಾಂಗು ಮಚ್ಚಿನಿಂದ ಚೇತನ್ ಹಾಗೂ ಸಹಚರರ ಜೊತೆಗೂಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಹಲ್ಲೆಗೊಳಗಾದ ಉಮೇಶ್‌ ಕುಮಾ‌ರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಲಕ್ಷ್ಮೀಪುರಂ ಠಾಣೆಯಲ್ಲಿ ಭೂಮಿಕಾ, ಚೇತನ್, ಅಭಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ABOUT THE AUTHOR

...view details