ಮೈಸೂರು: ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ಕೃಷ್ಣಾ ಬಾಯಿ ತುಕಾರಾಂ ಪಡ್ಕೆ (25) ಮೃತರು. ಇವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎಸ್ಗಳ್ಳಿ ಗ್ರಾಮದವರು. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಶಾನುಭೋಗನಹಳ್ಳಿ ಗ್ರಾಮದಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕಳೆದ ತಿಂಗಳು ಹನೂರು ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಬೆಳಗಾವಿ ಮೂಲದ ಸುಭಾಷ್ ಬೊಂಸ್ಲೆ ಜೊತೆ ವಿವಾಹವಾಗಿದ್ದರು. ನಾಲ್ಕು ದಿನದ ಹಿಂದೆಷ್ಟೇ ಕೆಲಸಕ್ಕೆ ಹಾಜರಾಗಿದ್ದ ಕೃಷ್ಣಾ ಬಾಯಿ, ಬಿಳಿಕೆರೆಯ ತಮ್ಮ ನಿವಾಸದ ಕೊಠಡಿಯಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ತಾಯಿಯೊಂದಿಗೆ ವಾಸವಿದ್ದರು ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಶನಿವಾರ ಕೃಷ್ಣಾ ಬಾಯಿ ಮತ್ತವರ ತಾಯಿ ಮನೆಯಲ್ಲೇ ಇದ್ದರು. ಬೆಳಗ್ಗೆಯಿಂದಲೇ ಯಾರೊಂದಿಗೋ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ನಂತರ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಅನೇಕ ಬಾರಿ ಕೂಗಿದರೂ ಬಾಗಿಲು ಓಪನ್ ಮಾಡಿದಿರುವುದನ್ನು ಕಂಡು ಏನೋ ಅನಾಹುತ ಆಗಿರಬೇಕೆಂದು ಅಕ್ಕ ಪಕ್ಕದವರ ನೆರವಿನಿಂದ ಬಾಗಿಲು ಒಡೆದು ನೋಡಿದಾಗ ಕಿಟಕಿಯ ಸರಳಿಗೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ದೇಹ ಪತ್ತೆಯಾಗಿತ್ತು.
ಇದನ್ನೂ ಓದಿ :ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬಂದ ಏರ್ಲೈನ್ಸ್ ಗಗನಸಖಿ ಅನುಮಾನಾಸ್ಪದ ಸಾವು