ಮೈಸೂರು: ಸಾಲಬಾಧೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ನಡೆದಿದೆ. ನಾಗೇಗೌಡರ ಎಂಬುವರ ಪುತ್ರ ಮಂಜುನಾಥ್ (47) ಎಂಬುವರು ಸಾವಿಗೀಡಾದ ರೈತ.
ಮಂಜುನಾಥ್ಗೆ 2.16 ಎಕರೆ ಜಮೀನಿದೆ. ಕೊಲ್ಲೂರು ಪಿಎಸ್ಎಸ್ಎನ್ಬಿ ಸೇರಿದಂತೆ ಹಲವೆಡೆ 18 ಲಕ್ಷ ರೂ.ನಷ್ಟು ಸಾಲ ಮಾಡಿಕೊಂಡಿದ್ದಾರೆ. ಈ ಹಿಂದೆ ಬೆಳೆದ ಬೆಳೆ ಸಹ ಸರಿಯಾಗಿ ಬಾರದೆ ನಷ್ಟ ಅನುಭವಿಸಿದ್ದರು.