ಮೈಸೂರು: ಕಾಳಿಕಾಂಬ ದೇವಸ್ಥಾನಕ್ಕೆ ಸೇರಿದ ದೇವರ ಗೂಳಿ ನಾಪತ್ತೆಯಾಗಿರುವ ಘಟನೆ ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ನಡೆದಿದೆ.
ದೇವರ ಗೂಳಿ ನಾಪತ್ತೆ: ಮಾಹಿತಿ ಇದ್ದರೆ ತಿಳಿಸಿ ಎಂದು ನಾಮಫಲಕ - Kalikamba Temple
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿರುವ ಕಾಳಿಕಾಂಬ ದೇವಸ್ಥಾನಕ್ಕೆ ಸೇರಿದ ದೇವರ ಗೂಳಿ ಕೆಲವು ದಿನಗಳಿಂದ ನಾಪತ್ತೆಯಾಗಿದೆ.

ದೇವರ ಗೂಳಿ ನಾಪತ್ತೆ..
ಜಿಲ್ಲೆಯ ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿರುವ ಕಾಳಿಕಾಂಬ ದೇವಸ್ಥಾನಕ್ಕೆ ಸೇರಿದ ದೇವರ ಗೂಳಿ ಕೆಲವು ದಿನಗಳಿಂದ ನಾಪತ್ತೆಯಾಗಿದೆ. ಎಂದಿನಂತೆ ದೇವಸ್ಥಾನದ ಸಮೀಪದಲ್ಲೇ ಓಡಾಡಿಕೊಂಡು ಇರುತ್ತಿದ್ದ ಗೂಳಿ ಕಳೆದ 10 ದಿನಗಳ ಹಿಂದೆ ಕಾಣೆಯಾಗಿದೆ ಎನ್ನಲಾಗಿದೆ.
ಗೂಳಿ ಎಲ್ಲಾದರೂ ಕಂಡುಬಂದರೆ ತಿಳಿಸಿ ಎಂದು ದೇವಾಲಯದ ಮುಂಭಾಗದಲ್ಲಿ ನಾಮಫಲಕ ಅಂಟಿಸಲಾಗಿದೆ. ಸದ್ಯ ನಾಪತ್ತೆಯಾಗಿರುವ ಗೂಳಿಯ ಹುಡುಕಾಟದಲ್ಲಿ ಕಾಳಿಕಾಂಬ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ತೊಡಗಿದ್ದಾರೆ.