ಕರ್ನಾಟಕ

karnataka

ETV Bharat / state

ದಾಯಾದಿಗಳ ಚುಚ್ಚು ಮಾತುಗಳಿಗೆ ಮನನೊಂದ 75ರ ವೃದ್ಧ: ನದಿಗೆ ಹಾರಿ ಆತ್ಮಹತ್ಯೆ - Etv Bharat Kannada

ದಾಯಾದಿಗಳ ಅಪಪ್ರಚಾರ ಮತ್ತು ಚುಚ್ಚು ಮಾತುಗಳಿಗೆ ಬೇಸರಗೊಂಡ 75 ವರ್ಷದ ವೃದ್ಧ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

A 75-year-old man committed suicide by jumping into the river
A 75-year-old man committed suicide by jumping into the river

By

Published : Sep 7, 2022, 7:56 PM IST

ಮೈಸೂರು:ಸಂಬಂಧಿಕರ ಚುಚ್ಚು ಮಾತಿನಿಂದ ಮನನೊಂದ ವೃದ್ಧರೊಬ್ಬರು ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ಹೆಜ್ಜಿಗೆ ಸೇತುವೆ ಬಳಿ ನಡೆದಿದೆ. ಸಿಂಧುವಳ್ಳಿ ಗ್ರಾಮದ ಚಿಕ್ಕಮಾದನಾಯಕ(75) ಆತ್ಮಹತ್ಯೆ ಮಾಡಿಕೊಂಡವರು.

ನಿರಂತರಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಗಾಳಿಗೆ ಚಿಕ್ಕಮಾದನಾಯಕ ಅವರ ಮನೆ ಕುಸಿದು ಬಿದ್ದಿತ್ತು. ಈ ಸಂಬಂಧ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಅಲ್ಲದೇ ಪರಿಹಾರ ಒದಗಿಸುವ ಭರವಸೆ ಸಹ ನೀಡಿದ್ದರು.

ಆದರೆ, ಚಿಕ್ಕಮಾದನಾಯಕ ಅವರ ಮೇಲಿನ ವೈಷಮ್ಯದಿಂದ ಅವರ ದಾಯದಿಗಳು, ಅವರ ಮನೆ ಮಳೆಗೆ ಬಿದ್ದಿಲ್ಲ, ಬದಲಾಗಿ ಸರ್ಕಾರದಿಂದ ಅನುದಾನ ಪಡೆಯುವ ದುರುದ್ದೇಶದಿಂದ ತಾನೇ ಸ್ವತಃ ಮನೆಯನ್ನು ಕೆಡವಿದ್ದಾರೆ ಎಂದು ತಹಶೀಲ್ದಾರ್​ಗೆ ದೂರು ನೀಡಿದ್ದರಂತೆ. ಈ ಸಂಬಂಧ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತಂತೆ.

ಗಲಾಟೆಯ ನಂತರ ಚಿಕ್ಕಮಾದನಾಯಕ ವಿರುದ್ಧ ದಾಯಾದಿಗಳೇ ಅಪಪ್ರಚಾರ ಮಾಡಿದ್ದು, ಈ ವಿಚಾರದಿಂದ ಮನನೊಂದು ಕಪಿಲಾ ನದಿಗೆ ಹಾರಿದ್ದಾರೆ. ಹೆಜ್ಜಿಗೆ ಸೇತುವೆ ಬಳಿ ತಮ್ಮ ಚಪ್ಪಲಿ, ಹಿರಿಯ ನಾಗರಿಕರ ಗುರುತಿನ ಚೀಟಿ, ಟವೆಲ್, ದೂರವಾಣಿ ಸಂಖ್ಯೆಗಳನ್ನು ಒಳಗೊಂಡ ಪುಸ್ತಕಗಳು ದೊರಕಿವೆ.

ಕುಟುಂಬಸ್ಥರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದು ಇಂದು ಮೃತ ದೇಹವನ್ನು ನದಿಯಿಂದ ಹೊರಗೆ ತೆಗೆದಿದ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಇದನ್ನೂ ಓದಿ:ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್: ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

ABOUT THE AUTHOR

...view details