ಮೈಸೂರು:ಮೈಸೂರು ನಗರದ ಸಿಎಫ್ಟಿಆರ್ಐ ಆವರಣದಲ್ಲಿ ನಡೆದ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿರುವ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ. 300ಕ್ಕೂ ಹೆಚ್ಚು ಸಿಎಫ್ಟಿಆರ್ಐ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಲವಾರು ಖಾಸಗಿ ಕಂಪನಿಗಳೂ ಸಹ ಸಮ್ಮೇಳನದಲ್ಲಿ ಭಾಗವಹಿಸಿವೆ.
ಗಮನಸಳೆದ ರೈತನ ಸಿರಿಧಾನ್ಯದ ನಂಬಿಕೆ ಪ್ರಾಡಕ್ಟ್;ಸಿರಿಧಾನ್ಯಗಳಿಂದ ಪ್ರೋಟೀನ್ ಪೌಡರ್ ತಯಾರಿಸುವ ತರಬೇತಿ ಪಡೆದು ತಾನೇ ಸಿರಿಧಾನ್ಯ ಮಾಲ್ಟ್ ಅನ್ನು ಉತ್ಪಾದಿಸಿ ಉದ್ಯಮಿಯಾಗಿರುವ ರೈತರೊಬ್ಬರು ಮೇಳದಲ್ಲಿ ಎಲ್ಲರ ಗಮನಸೆಳೆದರು. ಇಂದು ನಡೆದ 9ನೇ ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಸಿರಿಧಾನ್ಯದ ಮಾಲ್ಟ್ ಅನ್ನು ಉಚಿತವಾಗಿ ವಿತರಿಸಿ 'ನಂಬಿಕೆ' ಪ್ರಾಡಕ್ಟ್ ಮಹತ್ವದ ಬಗ್ಗೆ ರೈತ, ಉದ್ಯಮಿ ಮಿಲ್ ನಾಗರಾಜ್ ಅವರು ಗ್ರಾಹಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೈತ ಮಿಲ್ ನಾಗರಾಜು ಈಟಿವಿ ಭಾರತ ಜೊತೆ ಮಾತನಾಡಿ, ಸಿ ಎಫ್ ಟಿ ಆರ್ ಐ ನಿಂದ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸಬೇಕೆಂದು ನಿರ್ಧರಿಸಿದೆ. ನಂತರ ಕೆಲ ದಿನಗಳಲ್ಲಿ ಹೆಚ್ ಡಿ ಕೋಟೆಯಲ್ಲಿ ಸಣ್ಣದೊಂದು ಗೃಹ ಕೈಗಾರಿಕೆ ಸ್ಥಾಪನೆ ಮಾಡಿಕೊಂಡು ಸಿರಿಧಾನ್ಯ ವಿವಿಧ ಮಾಲ್ಟ್ ಉತ್ಪಾದಿಸಲು ಶುರು ಮಾಡಿದೆ. ಆರಂಭದಲ್ಲಿ ಸಿರಿಧಾನ್ಯ ಮಾಲ್ಟ್ ಕಡಿಮೆ ಉತ್ಪಾದಿಸುತ್ತಿದ್ದೇವು. ನಂತರ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೆಚ್ಚು ಉತ್ಪಾದನೆ ಶುರು ಮಾಡಿದೆನು. ರೈತರಿಂದ ನೇರವಾಗಿ ಸಿರಿಧಾನ್ಯ ಖರೀದಿಸುವೆ. ಗುಣಮಟ್ಟ, ಶುದ್ಧತೆಯಿಂದ ಸಿರಿಧಾನ್ಯ ಮಾಲ್ಟ್ ತಯಾರಿಸಿ ನಂಬಿಕೆ ಹೆಸರಿನಲ್ಲಿ ಪ್ರೋಟೀನ್ ಪೌಡರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರೈತ, ಮಣ್ಣು, ನೀರು ಉಳಿದರೆ ಅನ್ನದಾತ ಉಳಿದ ಹಾಗೆ, ಆ ಉದ್ದೇಶ ಇಟ್ಟುಕೊಂಡು ನಂಬಿಕೆ ಹೆಸರಿನ ಪ್ರೊಡಕ್ಟ್ ಅನ್ನು ಆರಂಭಿಸಿದೆ. ಅದರಲ್ಲಿ 9 ಬಗ್ಗೆಯ ಸಿರಿಧಾನ್ಯಗಳು 5 ಬಗೆಯ ಡ್ರೈ ಫ್ರೂಟ್ಸ್ ಗಳಿಂದ ತಯಾರಿಸಿದ ನಂಬಿಕೆ ಪ್ರೋಟೀನ್ ಪೌಡರ್ ಅನ್ನು ತಯಾರಿಸಲಾಗಿದೆ. ಇದು ಬಿ ಪಿ, ಶುಗರ್, ಥೈರಾಯ್ಡ್, ಕೊಲೆಸ್ಟ್ರಾಲ್, ಪಿರಿಯಡ್ ಪ್ರಾಬ್ಲಮ್, ಜಾಯಿಂಟ್ ಪೈನ್ ಸೇರಿದಂತೆ ದೇಹಕ್ಕೆ ಬೇಕಾದ ನ್ಯೂಟ್ರಿಷನ್ ಅನ್ನು ನೀಡುತ್ತದೆ ಎಂದು ನಾಗರಾಜ್ ತಿಳಿಸಿದರು.