ಕರ್ನಾಟಕ

karnataka

ETV Bharat / state

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ: 7,901 ಮತಗಳು ತಿರಸ್ಕೃತ - rejected votes

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ 7,901 ಮತಗಳು ತಿರಸ್ಕೃತಗೊಂಡಿವೆ.

7,901 votes rejected in South Graduate constituency election
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ: 7,901 ಮತಗಳು ತಿರಸ್ಕೃತ

By

Published : Jun 17, 2022, 6:44 PM IST

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಚಲಾವಣೆಗೊಂಡ 99,304 ಮತಗಳಲ್ಲಿ 7,901 ಮತಗಳು ತಿರಸ್ಕೃತಗೊಂಡಿವೆ. ವಿದ್ಯಾವಂತ ಮತದಾರರೇ ತಪ್ಪು ತಪ್ಪಾಗಿ ಮತ ಚಲಾವಣೆ ಮಾಡಿ ತಮ್ಮ ಮತಗಳನ್ನು ಹಾಳು ಮಾಡಿಕೊಂಡಿದ್ದಾರೆ.

ಮತದಾನದ ಸಂದರ್ಭದಲ್ಲಿ ವಿದ್ಯಾವಂತ ಪದವೀಧರ ಮತದಾರರಿಗೆ ಮತದಾನದ ಕುರಿತು ಅರಿವು ಮೂಡಿಸಲಾಗಿತ್ತು. ಆದರೆ ಅವರು ಮತದಾನದ ಸಂದರ್ಭದಲ್ಲಿ ಅಂಕಿಗಳನ್ನು ಬರೆಯುವ ಬದಲು ಅಕ್ಷರ ಬರೆದಿದ್ದಾರೆ. ಕಾಲಂ ಬಿಟ್ಟು ಬೇರೆ ಕಡೆ ಅಂಕಿಗಳಲ್ಲಿ ಮತದಾನ ಮಾಡಿದ್ದಾರೆ. ಒಂದೇ ಅಭ್ಯರ್ಥಿಗೆ ಎರಡು ಮತಗಳನ್ನು ಹಾಕಿದ್ದಾರೆ. ಮತದಾನ ಮಾಡುವಾಗ 1 ಎಂದು ನಮೂದಿಸುವ ಬದಲು ಟಿಕ್ ಮಾರ್ಕ್ ಹಾಕಿದ್ದಾರೆ. ಕೆಲವು ಮತದಾರರು ಮತಪತ್ರದ ಮೇಲೆ ತಮ್ಮ ಬೇಡಿಕೆಗಳನ್ನು ಬರೆದಿದ್ದಾರೆ. ಮತದಾನಕ್ಕೆ ಬಳಸುವ ಇಂಕನ್ನು ಸರಿಯಾಗಿ ಬಳಸಿಲ್ಲ. ಕೆಲವು ಮತದಾರರು ಖಾಲಿ ಮತಪತ್ರ ಹಾಕಿದ್ದಾರೆ. ಹೀಗೆ ಪ್ರಜ್ಞಾವಂತ ಮತದಾರರಾದ ಪದವೀಧರರ 7,901 ಮತಗಳು ತಿರಸ್ಕೃತವಾಗಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಗಲಭೆಯಾಗದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ : ಸಿಎಂ ಬೊಮ್ಮಾಯಿ

ABOUT THE AUTHOR

...view details