ಮೈಸೂರು: ಉಸಿರಾಟದ ತೊಂದರೆಯಿಂದ ಕೋವಿಡ್-19 ಸೋಂಕಿಗೆ ತುತ್ತಾಗಿದ್ದ (ರೋಗಿ ಸಂಖ್ಯೆ 273) 72 ವರ್ಷದ ವೃದ್ಧ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಗೆದ್ದ 72 ರ ವೃದ್ಧ: ಇದು ಆಶಾದಾಯಕ ಎಂದ ಜಿಲ್ಲಾಧಿಕಾರಿ - ಕೊರೊನಾ ಹಾಟ್ಸ್ಪಾಟ್ ಮೈಸೂರು
ರಾಜ್ಯದಲ್ಲಿ ಕೊರೊನಾ ಹಾಟ್ಸ್ಪಾಟ್ ಆಗಿರುವ ಮೈಸೂರು ಜಿಲ್ಲೆಯಲ್ಲಿ ಈಗ ವೃದ್ಧನೊಬ್ಬ ಕೊರೊನಾದಿಂದ ಸಂಪೂರ್ಣ ಗುಣಮುಖನಾಗಿದ್ದಾರೆ.
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಫೌಂಡೇಶನ್ನಿಂದ ಆರೋಗ್ಯ ಕಿಟ್ ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 72 ವರ್ಷದ ವೃದ್ಧನ ಪ್ರಕರಣ ತುಂಬಾ ಗಂಭೀರವಾಗಿತ್ತು. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಪ್ರಯತ್ನದಿಂದ ಅವರು ಗುಣಮುಖರಾಗಿದ್ದಾರೆ. ಅಲ್ಲದೇ 8 ಮಂದಿ ಡಿಸ್ಚಾಜ್೯ ಆಗಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಕಡಿಮೆಯಾಗಲಿವೆ ಎಂದು ತಿಳಿಸಿದರು.
ಜಿಲ್ಲೆ ಗ್ರೀನ್ ಝೋನ್ಗೆ ಬರಲು ಕೆಲವು ದಿನಗಳು ಬೇಕಾಗುತ್ತವೆ. ಮೊದಲು ಆರೆಂಜ್ ಝೋನ್ಗೆ ಬಂದು ನಂತರ ಗ್ರೀನ್ಗೆ ಬರಬೇಕು. ಆರೆಂಜ್ ಝೋನ್ಗೆ ಬರಲು ಕೊರೊನಾ ಪ್ರಕರಣ ಸೊನ್ನೆಯಾಗಬೇಕು. ಆದಾದ ನಂತರ 20 ದಿನ ಕಾದು ನಂತರ ಗ್ರೀನ್ ಝೋನ್ ಘೋಷಣೆ ಮಾಡಲಾಗುತ್ತೆ. ಸದ್ಯ ಪ್ರಕರಣಗಳು ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಗರ್ಭಿಣಿಯರಿಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.