ಕರ್ನಾಟಕ

karnataka

ETV Bharat / state

ಇಲ್ನೋಡಿ ಶುಭ ಸುದ್ದಿ.. ಮೈಸೂರಿನ 7 ಮಂದಿ ಕೊರೊನಾದಿಂದ ಸಂಪೂರ್ಣ ಗುಣಮುಖ.. - ಕೊರೊನಾ ಗುಣಮುಖ

ಸೋಂಕಿನಿಂದ ಗುಣಮುಖರಾದವರು ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಏಳು ಮಂದಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದು, ಆನಂತರ ಮನೆಗೆ ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್​ ಜಿ ಶಂಕರ್ ಮಾಹಿತಿ ನೀಡಿದ್ದಾರೆ.

Corona
ಕೊರೊನಾ

By

Published : Apr 12, 2020, 1:36 PM IST

ಮೈಸೂರು :ದಿನೇದಿನೆ ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ರೂ ಆಶಾದಾಯಕ ಬೆಳವಣಿಗೆಯೂ ಇವತ್ತು ನಡೆದಿದೆ. ಇಂದು 7 ಮಂದಿ ಕೊರೊನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಗುಣಮುಖರಾದ 7 ಮಂದಿಯಲ್ಲಿ ಆರು ಜನರು ಜ್ಯುಬಿಯಂಟ್​ ಕಾರ್ಖಾನೆ ನೌಕರರಾಗಿದ್ದಾರೆ. ಮತ್ತೊಬ್ಬ ವಿದೇಶದಿಂದ ಬಂದವರಾಗಿದ್ದಾರೆ. ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 45 ರಿಂದ 38ಕ್ಕೆ ಇಳಿಕೆಯಾಗಿದೆ.

ಸೋಂಕಿನಿಂದ ಗುಣಮುಖರಾದವರು ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಏಳು ಮಂದಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದು, ಆನಂತರ ಮನೆಗೆ ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್​ ಜಿ ಶಂಕರ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details