ಕರ್ನಾಟಕ

karnataka

ETV Bharat / state

ಮೈಸೂರು: ಪ್ರಥಮ ಪಕ್ಷಿ ಗಣತಿ... 6 ಹೊಸ ಜಾತಿಯ ಹಕ್ಕಿಗಳು ಪತ್ತೆ - 6 new species of birds were discovered in the first bird census at mysore

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 4 ದಿನಗಳ ಕಾಲ ಪಕ್ಷಿಗಳ ಪ್ರಥಮ ಗಣತಿ ಕಾರ್ಯ ನಡೆದಿದ್ದು, ಬ್ಲಾಕ್ ರೆಡ್ ಸ್ಟಾರ್ಟ್, ಗ್ರೀನಿಷ್ ವಾರ್ ಬ್ಲರ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಪಾಟ್ ಬೆಲ್ಲಿಡ್ ಈಗಲ್ ಔಲ್, ನೀಲಗಿರಿ ಫ್ಲವರ್ ಪಿಕ್ಕರ್, ಮಾಂಟಾಗೂ ಹ್ಯಾರಿಯರ್ ಪಕ್ಷಿಗಳನ್ನು ಗುರುತಿಸಲಾಗಿದೆ.

6-new-species-of-birds-were-discovered-in-the-first-bird-census-at-mysore
ಪ್ರಥಮ ಪಕ್ಷಿ ಗಣತಿಯಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆ

By

Published : Jan 28, 2021, 7:19 PM IST

ಮೈಸೂರು: ಪಕ್ಷಿಗಳ ಮೊದಲ ಗಣತಿ ಕಾರ್ಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 4 ದಿನಗಳ ಕಾಲ ನಡೆಯಿತು. ಇದರಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆಯಾಗಿವೆ.

ಪಕ್ಷಿ ಗಣತಿ

ಉದ್ಯಾನದ 8 ವಲಯಗಳ 91 ಬೀಟ್​​ಗಳಲ್ಲಿ 75 ಮಂದಿ ಪಕ್ಷಿಪ್ರಿಯ ಸ್ವಯಂ ಸೇವಕರು ಮತ್ತು ಪೊನ್ನಂಪೇಟೆ ಅರಣ್ಯ ಕಾಲೇಜಿನ 36 ವಿದ್ಯಾರ್ಥಿಗಳು ಹಾಗೂ ಇಲ್ಲಿನ ಅಧಿಕಾರಿ, ಸಿಬ್ಬಂದಿ 4 ದಿನಗಳ ಕಾಲ ನಡೆಸಿದ ಪಕ್ಷಿ ಸಮೀಕ್ಷೆಯಲ್ಲಿ ಒಟ್ಟು 270 ಪ್ರಭೇದಗಳನ್ನು ಗುರುತಿಸಿದ್ದಾರೆ.

ಪಶ್ಚಿಮಘಟ್ಟಗಳಲ್ಲಿ ಕಾಣಿಸಿಕೊಳ್ಳುವ ಮಲಬಾರ್ ಪಾರಾಕೀಕ್ಷಿಟ್, ಮಲಬಾರ್ ಗ್ರೇ, ಹಾರ್ನ್ ಬಿಲ್ ಸೇರಿದಂತೆ ಅನೇಕ ಪ್ರಭೇದಗಳನ್ನು ಗುರುತಿಸಲಾಗಿದೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನವಿಲು, ಮೈನಾ, ಬುಲ್ ಬುಲ್, ರಣಹದ್ದುಗಳು, ಉಲಿ ನೆಕ್ಲನ್ಸ್ ಸಾರ್ಪ, ಹೆರಾನ್ಸ್ ಪಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ.

ಪ್ರಥಮ ಪಕ್ಷಿ ಗಣತಿಯಲ್ಲಿ ಸಿಬ್ಬಂದಿ ಜೊತೆ ಕಾಲೇಜು ವಿದ್ಯಾರ್ಥಿ

ಆರು ಹೊಸ ಪಕ್ಷಿಗಳು ಪತ್ತೆ:ನಾಗರಹೊಳೆ ಉದ್ಯಾನದಲ್ಲಿ ಗುರುತಿಸಿದ ಪಟ್ಟಿಯಲ್ಲಿಲ್ಲದ ಆರು ಪಕ್ಷಿಗಳು ಸಮೀಕ್ಷೆಯಲ್ಲಿ ಪತ್ತೆಯಾಗಿವೆ. ಬ್ಲಾಕ್ ರೆಡ್ ಸ್ಟಾರ್ಟ್, ಗ್ರೀನಿಷ್ ವಾರ್ ಬ್ಲರ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಪಾಟ್ ಬೆಲ್ಲಿಡ್ ಈಗಲ್ ಔಲ್, ನೀಲಗಿರಿ ಫ್ಲವರ್ ಪಿಕ್ಕರ್, ಮಾಂಟಾಗೂ ಹ್ಯಾರಿಯರ್ ಪಕ್ಷಿಗಳನ್ನು ಗುರುತಿಸಲಾಗಿದೆ.

ಓದಿ:ಯಾವುದೇ ಶಾಲೆಯಲ್ಲಿ ಮಕ್ಕಳು, ಶಿಕ್ಷಕರಿಗೆ ಕೊರೊನಾ ಸೋಂಕು ಹರಡಿರುವ ಬಗ್ಗೆ ವರದಿಯಾಗಿಲ್ಲ: ಸುರೇಶ್ ಕುಮಾರ್

ಸಮೀಕ್ಷೆಯಲ್ಲಿ ಕಲ್ಲಹಳ್ಳವಲಯದಲ್ಲಿ 224, ಡಿ.ಬಿ.ಕುಪ್ಪೆಯಲ್ಲಿ 215, ಹುಣಸೂರಿನಲ್ಲಿ 209, ಆನೆಚೌಕೂರಿನಲ್ಲಿ 194, ಮೇಟಿ ಕುಪ್ಪೆಯಲ್ಲಿ 191, ನಾಗರಹೊಳೆಯಲ್ಲಿ 165, ಅಂತರಸಂತೆಯಲ್ಲಿ 142, ವೀರನ ಹೊಸಹಳ್ಳಿಯಲ್ಲಿ 191 ವಿವಿಧ ಜಾತಿಯ ಪಕ್ಷಿಗಳು ಕಂಡುಬಂದಿವೆ.

ABOUT THE AUTHOR

...view details