ಮೈಸೂರು: ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮ್ದಾಸ್ ಅವರ ಇಬ್ಬರು ಆಪ್ತರು ಸೇರಿದಂತೆ 51 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಈ ನಡುವೆ ಎಸ್ಎಆರ್ಇ ಪ್ರಕರಣದಿಂದ ನಾಲ್ವರು ಸಾವನಪ್ಪಿದ್ದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ 20 ಮಂದಿ ಬಲಿಯಾದಂತಾಗಿದೆ.
ಮೈಸೂರಲ್ಲಿಂದು 51 ಮಂದಿಗೆ ಕೊರೊನಾ: ಶಾಸಕ ರಾಮ್ದಾಸ್ ಆಪ್ತರಿಬ್ಬರಿಗೆ ಸೋಂಕು - District of Mysore
ಮೈಸೂರಲ್ಲಿ ಕೊರೊನಾ ಅಬ್ಬರ ಮುಂದುವರಿದಿದೆ. ಇಂದು 51 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಶಾಸಕ ರಾಮ್ದಾಸ್ ಆಪ್ತರಿಬ್ಬರಿಗೆ ಕೊರೊನಾ ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮೈಸೂರಲ್ಲಿಂದು 51 ಮಂದಿಗೆ ಕೊರೊನಾ: ಶಾಸಕ ರಾಮ್ದಾಸ್ ಆಪ್ತರಿಬ್ಬರಿಗೂ ಸೋಂಕು
ಒಟ್ಟಾರೆ ಮೈಸೂರಿನಲ್ಲಿ 692 ಕೊರೊನಾ ಪ್ರಕರಣ ದಾಖಲಾಗಿದ್ದು, 307 ಸಕ್ರಿಯ ಪ್ರಕರಣಗಳಿವೆ. ಇದಲ್ಲದೆ ಇಂದು 25 ಮಂದಿ ಡಿಸ್ಚಾಜ್೯ ಆಗಿದ್ದು, ಒಟ್ಟಾರೆ 365 ಮಂದಿ ಕೊರೊನಾ ಗೆದ್ದು ಮನೆ ಸೇರಿದ್ದಾರೆ.