ಕರ್ನಾಟಕ

karnataka

By

Published : Aug 6, 2020, 11:06 AM IST

ETV Bharat / state

ಕಬಿನಿಯಿಂದ ಕಪಿಲಾಗೆ 50,000 ಕ್ಯೂಸೆಕ್ ನೀರು ರಿಲೀಸ್​ : ಪ್ರವಾಹ ಭೀತಿಯಲ್ಲಿ ದಕ್ಷಿಣ ಕಾಶಿ

ಕಬಿನಿ ಜಲಾಶಯದಿಂದ 50,000 ಕ್ಯೂಸೆಕ್ ನೀರನ್ನು ಕಪಿಲಾ‌ ನದಿಗೆ ಬಿಟ್ಟಿರುವುದರಿಂದ ಕಪಿಲಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಪ್ರವಾಹ ಭೀತಿಯಲ್ಲಿ ದಕ್ಷಿಣ ಕಾಶಿ
ಪ್ರವಾಹ ಭೀತಿಯಲ್ಲಿ ದಕ್ಷಿಣ ಕಾಶಿ

ಮೈಸೂರು: ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಭಾರಿ ಪ್ರಮಾಣದ ನೀರನ್ನು ಬಿಟ್ಟಿರುವುದರಿಂದ ನದಿ ಪಾತ್ರದ ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕಳೆದ ಒಂದು ವಾರದಿಂದ ಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ 40,000 ಕ್ಯೂಸೆಕ್ ಗೂ​ ಹೆಚ್ಚಿನ ಒಳ ಹರಿವಿದೆ. ಪರಿಣಾಮ ಕಬಿನಿ ಜಲಾಶಯ ತುಂಬಲು ಇನ್ನು 4 ಅಡಿ ಮಾತ್ರ ಬಾಕಿ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 50,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಇದರಿಂದ ಸೇತುವೆಗಳು ಮುಳುಗಡೆಯಾಗಿದ್ದು, ಗ್ರಾಮಗಳ ಸಂಪರ್ಕವೇ ಇಲ್ಲದಂತಾಗಿದೆ.

ಪ್ರವಾಹ ಭೀತಿಯಲ್ಲಿ ದಕ್ಷಿಣ ಕಾಶಿ

ಭಾರಿ ಮಳೆಗೆ ನಿನ್ನೆ ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಗ್ರಾಮದ ಮಾದೇವೇಗೌಡ ಭಾರಿ ಮಳೆ- ಗಾಳಿಯಿಂದ ಮರ ಬಿದ್ದು ಸಾವನ್ನಪ್ಪಿದ್ದಾರೆ. ಇಂದು ಮಾದಾಪುರದ ವೃದ್ಧ ಶಿವನಂಜಯ್ಯ ಮನೆ ಗೋಡೆ ಕುಸಿದು ಮೃತಪಟ್ಟಿದಾರೆ. ಇದರ ಜೊತೆಗೆ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಗೆ ಎಚ್.ಡಿ ಕೋಟೆ ತಾಲೂಕಿನ 24 ಮನೆಗಳ ಗೋಡೆ ಕುಸಿದಿದ್ದು, ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರವಾಹ ಭೀತಿಯಲ್ಲಿ ದಕ್ಷಿಣ ಕಾಶಿ: ಕಬಿನಿ ಜಲಾಶಯದಿಂದ 50,000 ಕ್ಯೂಸೆಕ್ ನೀರನ್ನು ಕಪಿಲಾ‌ ನದಿಗೆ ಬಿಟ್ಟಿರುವುದರಿಂದ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹತಿಯುತ್ತಿದೆ. ಕಳೆದ ವರ್ಷ ಪ್ರವಾಹ ಅವಾಂತರ ಮರೆಯುವ ಮುನ್ನವೇ ಮತ್ತೆ ದಕ್ಷಿಣ ಕಾಶಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ನದಿ ಪಾತ್ರದಲ್ಲಿರುವ ಶ್ರೀಕಂಠೇಶ್ವರ ಸ್ನಾನಘಟ್ಟದ ಹದಿನಾರು ಕಾಲು ಮಂಟಪ ಈಗಾಗಲೇ ಮುಳುಗಿದ್ದು, ನದಿಯ ನೀರು ಈಗಾಗಲೇ ನದಿಪಾತ್ರದ ಆಂಜನೇಯ ಸನ್ನಿಧಿ ಹಾಗೂ ದೇವಾಲಯಗಳ ಬಳಿ ಬಂದಿದ್ದು, ತಾಲೂಕು ಆಡಳಿತ ತಗ್ಗು ಪ್ರದೇಶದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದೆ.

ABOUT THE AUTHOR

...view details