ಮೈಸೂರು :ಮೈಸೂರು ವಿವಿಯಲ್ಲಿ ಶೇ.50% ಬೋಧಕ ಹುದ್ದೆಗಳು ಖಾಲಿ ಇವೆ ಎಂದು ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಶತಮಾನೋತ್ಸವದ ಘಟಿಕೋತ್ಸವ ಆಚರಿಸಿಕೊಂಡಿರುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮೈಸೂರು ವಿವಿಯೂ ಸಹ ಒಂದಾಗಿದೆ.
ಇಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಂಡಿಲ್ಲ. ಇದರಿಂದ ವಿವಿಯಲ್ಲಿ ಶೇ. 50%ರಷ್ಟು ಬೋಧಕ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ಮೈಸೂರು ವಿವಿ ಬೋಧಕ ಹುದ್ದೆಗಳ ಕುರಿತಂತೆ ಕುಲಪತಿಗಳ ಪ್ರತಿಕ್ರಿಯೆ.. ವಿವಿಯಲ್ಲಿ ಒಟ್ಟು ಬೋಧಕ ಹುದ್ದೆಗಳು 664. ಅದರಲ್ಲಿ ಈ ವರ್ಷ 379 ಮಂದಿ ಬೋಧಕರು ನಿವೃತ್ತರಾಗಿದ್ದಾರೆ. ಅಂದರೆ ಶೇ.50% ರಷ್ಟು ಬೋಧಕ ಹುದ್ದೆಗಳು ಖಾಲಿ ಇವೆ. ಈಗ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ತರಗತಿಗಳನ್ನು ನಡೆಸುತ್ತಿದ್ದೇವೆ.
ಈಗಾಗಲೇ ಬೋಧಕ ಹುದ್ದೆ ಭರ್ತಿ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಕೋವಿಡ್‌ಗಿಂತ ಮುಂಚೆ 280 ಹುದ್ದೆ ಭರ್ತಿ ಮಾಡಲು ಅನುಮತಿ ನೀಡಿತ್ತು. ಆದರೆ, ಕೋವಿಡ್ ಬಂದ ಹಿನ್ನೆಲೆ ನೇಮಕಾತಿ ತಡೆ ಹಿಡಿದಿದೆ. ಪುನಃ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ನ್ಯಾಷನಲ್ ಎಜುಕೇಷನ್ ಪಾಲಿಸಿ ಜಾರಿಗೆ ತರಲು ಬೋಧಕರು ಅವಶ್ಯಕವಾದ್ದರಿಂದ ನೇಮಕಾತಿ ಅಗತ್ಯವಾಗಿದೆ ಎಂದ ಅವರು, ಮುಂದಿನ 6 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಓದಿ:2ನೇ ಬಾರಿಗೆ ಮಂತ್ರಿಯಾದ ಎಂಟಿಬಿ ನಾಗರಾಜ್.. ಹೊಸಕೋಟೆ ಸಾಹುಕಾರ್‌ನ ರಾಜಕೀಯ ಹಾದಿ ಹೀಗಿದೆ..