ಮೈಸೂರು: ಪಾಲಿಕೆಯ ನೌಕರರು ಕೋವಿಡ್ನಿಂದ ಮೃತಪಟ್ಟರೆ ಅಂತಹ ಕುಟುಂಬಗಳಿಗೆ ಪರಿಹಾರವಾಗಿ 5 ಲಕ್ಷ ನೀಡಲಾಗುವುದು ಎಂದು ಪಾಲಿಕೆ ಆಯುಕ್ತೆ ಶಿಲ್ಪ ನಾಗ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಪೌರಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಲು ಪಾಲಿಕೆ ತಿರ್ಮಾನಿಸಿದೆ. ಪೌರಕಾರ್ಮಿಕರನ್ನು 'FRONT LINE WARRIORS' ಎಂದು ಪರಿಗಣಿಸಿ ಪ್ರತ್ಯೇಕ ಆಸ್ಪತ್ರೆ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.
ಪಾಲಿಕೆಯಲ್ಲಿ ಖಾಯಂ ಪೌರಕಾರ್ಮಿಕರು ಮೃತಪಟ್ಟರೆ 30 ಲಕ್ಷ ಪರಿಹಾರವನ್ನು ಸರ್ಕಾರ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಲಿದೆ. ಅದಕ್ಕೂ ಮುಂಚೆ ಪಾಲಿಕೆ ಮೊದಲು 5 ಲಕ್ಷ ರೂ. ಪರಿಹಾರ ನೀಡಲು ತಿರ್ಮಾನಿಸಲಾಗಿದೆ ಎಂದರು.
ಪಾಲಿಕೆಯಲ್ಲಿ 6 ಮಂದಿ ಪೌರಕಾರ್ಮಿಕರು ಕೋವಿಡ್ ಸೋಂಕಿಗೆ ಒಳಗಾಗಿದ್ದು, ನಾಲ್ವರು ಹೊಂ ಐಸೋಲೆಷನ್ನಲ್ಲಿದ್ದಾರೆ. ಉಳಿದ ಇಬ್ಬರು ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಪಾಲಿಕೆಯ ಇಬ್ಬರು ಹೊರಗುತ್ತಿಗೆ ನೌಕರರು ಕೋವಿಡ್ಗೆ ಬಲಿಯಾಗಿದ್ದಾರೆ. ಇದರಲ್ಲಿ ಫಾಗಿಂಗ್ ಆಟೋ ಚಾಲಕ ವಿನೋದ್ ಕುಮಾರ್ (28) ಕೋವಿಡ್ನಿಂದ ಮೃತಪಟ್ಟರೆ ಮತ್ತೊಬ್ಬ ರವಿ ಎಂಬ ಚಾಲಕ ಮಾತ್ರ ಬ್ಲ್ಯಾಕ್ ಫಂಗಸ್ಗೆ ಬಲಿಯಾಗಿದ್ದಾನೆ ಎಂದು ಶಿಲ್ಪ ನಾಗ್ ಮಾಹಿತಿ ನೀಡಿದರು.