ಮೈಸೂರು: ಕಳೆದ ಮೂರು ದಿನಗಳಿಂದ ನಗರದ ಟಿ.ಕೆ ಬಡಾವಣೆಯಲ್ಲಿ ಐದು ಬೀದಿ ನಾಯಿಗಳು ಸಾವನ್ನಪ್ಪಿದ್ದು , ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಟಿ.ಕೆ ಬಡಾವಣೆಯಲ್ಲಿ ಮೂಡಾಗೆ ಸೇರಿದ ಖಾಲಿ ನಿವೇಶನದಲ್ಲಿ ಕಳೆದ ಮೂರು ದಿನಗಳಿಂದ ಸಂಶಯಾಸ್ಪದವಾಗಿ ಐದು ನಾಯಿಗಳು ಸಾವನ್ನಪ್ಪಿವೆ. ಅಸ್ವಸ್ಥಗೊಂಡ ಎರಡು ನಾಯಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪಾಲಿಕೆಯ ಪಶುವೈದ್ಯರು ಆಗಮಿಸಿ ಸತ್ತ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.