ಮೈಸೂರು: ಮೈಸೂರು ರೈಲ್ವೆ ಮ್ಯೂಸಿಯಂ ನವೀಕರಣ ಹಾಗೂ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಕ್ಕೆ ಸಂಸದರ ಮನವಿಗೆ ರೈಲ್ವೆ ಸಚಿವ ಸುರೇಶ್ ಅಂಗಡಿ ಒಪ್ಪಿಗೆ ನೀಡಿದ್ದಾರೆ.
ಮೈಸೂರು ರೈಲ್ವೆ ಮ್ಯೂಸಿಯಂಗೆ 5 ಕೋಟಿ ರೂ. ಅನುದಾನ
ಮೈಸೂರು ರೈಲ್ವೆ ಮ್ಯೂಸಿಯಂ ನವೀಕರಣ ಹಾಗೂ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಕ್ಕೆ ಸಂಸದರ ಮನವಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಒಪ್ಪಿಗೆ ನೀಡಿದ್ದಾರೆ.
mysore-railway-museum
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾಗಿ, ರೈಲ್ವೆ ಮ್ಯೂಸಿಯಂ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಅನುದಾನ ಅಗತ್ಯವಿದೆ. ಅದನ್ನು ಒದಗಿಸುವಂತೆ ಮನವಿ ಮಾಡಿದರು. ಈ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಸಚಿವರು 5 ಕೋಟಿ ರೂಪಾಯಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಬೆಳಗಿನ ವೇಳೆ ಮೈಸೂರು-ಮಂಗಳೂರು ನಡುವೆ ರೈಲು ಸೇವೆ ಕಲ್ಪಿಸುವಂತೆ ಮನವಿ ಮಾಡಿದ ಸಂಸದ ಪ್ರತಾಪ್ ಸಿಂಹ ಅವರ ಮನವಿಗೆ ಸ್ಪಂದಿಸಿದ ಸಚಿವರು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.