ಮೈಸೂರು: ಜೋಡಿ ಆನೆ ದಂತಗಳು ಮತ್ತು ಜಿಂಕೆ ಕೊಂಬುನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಐವರನ್ನು ಅರಣ್ಯ ಸಂಚಾರ ದಳ ಪೋಲಿಸರು ಬಂಧಿಸಿದ್ದು, ಆರೋಪಿಗಳಿಂದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆನೆ ದಂತ, ಜಿಂಕೆ ಕೊಂಬು ಅಕ್ರಮ ಸಾಗಾಟ: ಐವರ ಬಂಧನ - ಆನೆ ದಂತ ಮತ್ತು ಜಿಂಕೆ ಕೊಂಬು ಸಾಗಾಟ ಮಾಡುತ್ತಿದ್ದವರ ಬಂಧನ
ಜೋಡಿ ಆನೆ ದಂತಗಳು ಮತ್ತು ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಐವರನ್ನು ಬಂಧಿಸಲಾಗಿದೆ.
![ಆನೆ ದಂತ, ಜಿಂಕೆ ಕೊಂಬು ಅಕ್ರಮ ಸಾಗಾಟ: ಐವರ ಬಂಧನ 5 arrested in illegal supply of elephant jaws and deer horns](https://etvbharatimages.akamaized.net/etvbharat/prod-images/768-512-8475549-393-8475549-1597826323244.jpg)
ಆನೆ ದಂತ ಮತ್ತು ಜಿಂಕೆ ಕೊಂಬು ಅಕ್ರಮ ಸಾಗಾಟ
ಖಚಿತ ಮಾಹಿತಿ ಮೇರೆಗೆ ಮೈಸೂರಿನ ಅರಣ್ಯ ಸಂಚಾರ ದಳವು ಅಬ್ದುಲ್ ಕಲಾಂನಗರದ ರಿಂಗ್ ರಸ್ತೆ ಬಳಿ ದಾಳಿ ನಡೆಸಿ, ಒಂದು ಜೋಡಿ ಆನೆ ದಂತಗಳು ಮತ್ತು ಜಿಂಕೆ ಕೊಂಬನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಿದೆ. ವಿನೋದ್, ರವಿಕುಮಾರ್, ಗೌತಮ್, ನಾಗರಾಜ್ ಮತ್ತು ಅಬ್ದುಲ್ ರಜಾಕ್ ಬಂಧಿತ ಆರೋಪಿಗಳು. ಈ ದಾಳಿ ನೇತೃತ್ವವನ್ನು ಡಿಸಿಎಫ್ ಎ.ಟಿ. ಪೂವಯ್ಯ ವಹಿಸಿದ್ದರು.