ಕರ್ನಾಟಕ

karnataka

ETV Bharat / state

ಮೈಸೂರು: ಒಂದೇ ದಿನ 461 ಮಂದಿ ಡಿಸ್ಚಾರ್ಜ್​, 455 ಮಂದಿಗೆ ಕೊರೊನಾ ದೃಢ

ಮೈಸೂರಿನಲ್ಲಿ ಒಟ್ಟಾರೆ ಈವರೆಗೆ 7,312 ಮಂದಿ ಕೊರೊನಾ ಸೋಂಕಿತರ ಪೈಕಿ, 3,208 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. 3,868 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

covid in Mysore ಮೈಸೂರು ಕೊರೊನಾ ಸುದ್ದಿ
covid in Mysore ಮೈಸೂರು ಕೊರೊನಾ ಸುದ್ದಿ

By

Published : Aug 9, 2020, 9:22 PM IST

ಮೈಸೂರು: ಕೊರೊನಾದಿಂದ ಗುಣಮುಖರಾದ 461 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಒಂದೇ ದಿನ‌ 455 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. ಕೊರೊನಾ ಸೋಂಕಿನಿಂದ 12 ಮಂದಿ ಮೃತಪಟ್ಟಿದ್ದಾರೆ.

ಸಂಪರ್ಕಿತರಿಂದ‌ 253, ಪ್ರಯಾಣದ ಹಿನ್ನೆಲೆಯುಳ್ಳವರು 135, ಐಎಲ್​ಐ 56, ಎಸ್​ಎಆರ್​ಐನಿಂದ 11 ಮಂದಿ ಸೇರಿದಂತೆ 455 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮೈಸೂರಿನಲ್ಲಿ ಒಟ್ಟಾರೆ ಈವರೆಗೆ 7,312 ಮಂದಿ ಕೊರೊನಾ ಸೋಂಕಿತರ ಪೈಕಿ, 3,208 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. 3,868 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 235 ಮಂದಿಯ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details