ಕರ್ನಾಟಕ

karnataka

ETV Bharat / state

ಮೈಸೂರು: ತಾಯಿ-ಮಗ, ಅಣ್ಣ-ತಮ್ಮನ ಬಲಿ ಪಡೆದ ಕೊರೊನಾ! - mysore latest news

ಸೋಂಕಿತರ ಪ್ರಮಾಣ ತಗ್ಗುತ್ತಿದ್ದರೂ ಮೃತರ ಸಂಖ್ಯೆ ಇಳಿದಿಲ್ಲ. ಯಡದೊರೆ ಗ್ರಾಮದ ನಿವಾಸಿಗಳಾದ ಸುರೇಶ್ ಮತ್ತು ಜಯಮ್ಮ, ವ್ಯಾಸರಾಜಪುರ ಗ್ರಾಮದ ರವಿ ಮತ್ತು ಚಂದ್ರು ಮಹಾಮಾರಿ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.

mysore covid case
ಮೈಸೂರು ಕೋವಿಡ್​ ಪ್ರಕರಣ

By

Published : May 19, 2021, 8:27 AM IST

ಮೈಸೂರು:ಪ್ರತ್ಯೇಕ ಘಟನೆಗಳಲ್ಲಿ ತಾಯಿ-ಮಗ ಹಾಗೂ ಅಣ್ಣ-ತಮ್ಮನನ್ನು ಒಂದೇ ದಿನ ಕೊರೊನಾ ಬಲಿ ಪಡೆದಿರುವ ಘಟನೆ ನರಸೀಪುರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಯಡದೊರೆ ಗ್ರಾಮದ ನಿವಾಸಿಗಳಾದ ಸುರೇಶ್(ಮಗ) ಮತ್ತು ಜಯಮ್ಮ(ತಾಯಿ), ವ್ಯಾಸರಾಜಪುರ ಗ್ರಾಮದ ರವಿ(ಅಣ್ಣ) ಮತ್ತು ಚಂದ್ರು(ತಮ್ಮ) ಮೃತ ದುರ್ದೈವಿಗಳು. ಕೊರೊನಾ ಸೋಂಕು ತಗುಲಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಸಕಲೇಶಪುರದಲ್ಲಿ ರೈಲು ಡಿಕ್ಕಿ ಹೊಡೆದು ಕಾಡಾನೆ ಸಾವು

ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದರೂ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ತಿ‌.ನರಸೀಪುರ ತಾಲೂಕಿನ ಜನತೆ ಆತಂಕಕ್ಕೊಳಗಾಗಿದ್ದಾರೆ.

ABOUT THE AUTHOR

...view details