ಮೈಸೂರು:ಎರಡು ಪ್ರತ್ಯೇಕ ಪ್ರಕರಣಳಲ್ಲಿ 6 ಜನ ಒಂದೇ ದಿನ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲೂಕಿನ ತಲಕಾಡು ಹೋಬಳಿ ಹೆಮ್ಮಿಗೆ ಬಿ ಗ್ರಾಮದ 4 ಬಾಲಕರು ಶಾಲೆಗೆ ರಜೆ ಇದ್ದ ಕಾರಣ ಕಾವೇರಿ ನದಿಯಲ್ಲಿ ಈಜಲು ಹೋದಾಗ ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಯಶವಂತ ಕುಮಾರ್(15), ಮಹದೇವಪ್ರಸಾದ್ (14), ಆಕಾಶ್ (15) ಹಾಗೂ ಕಿಶೋರ್(13) ಮೃತ ಬಾಲಕರು. ಇವರು ಪ್ರಾಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ .
ಸಂಜೆಯ ವೇಳೆಗೆ ಯಶ್ವಂತ್ ಕುಮಾರ್, ಮಹದೇವಪ್ರಸಾದ್ ಮೃತದೇಹಗಳು ದೊರೆತಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಜೆ ಘೋಷಣೆ ಮಾಡದಿದ್ದರೆ ನಮ್ಮ ಮಕ್ಕಳು ಬದುಕುಳಿಯುತ್ತಿದ್ದರೆಂದು ಪೋಷಕರು ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ.