ಮೈಸೂರು: ಚಾಮ್ - ಟ್ರಾಪ್ ಮತ್ತು ಉರುಳು ಬಳಸಿ ಹುಲಿ ಮತ್ತು ಚಿರತೆ ಭೇಟೆಯಾಡುತ್ತಿದ್ದ ನಾಲ್ವರು ಕಳ್ಳರನ್ನು ಅರಣ್ಯ ಸಂಚಾರಿ ವೀಚಕ್ಷಣ ದಳದವರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕೊಂದ ಚಿರತೆಯ ಮಾಂಸವನ್ನೇ ತಿಂದಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.
ಬಂಧಿತರನ್ನು ಹುಣಸೂರು ತಾಲೂಕಿನ ನೇಲ್ಲೂರು ಪಾಳ್ಯದ ಅಂಬೇಡ್ಕರ್ ನಗರದ ನಿವಾಸಿಗಳಾದ ಅರುಣ, ನಂಜುಂಡ, ರವಿ,ರಮೇಶ್ ಎಂದು ಗುರುತಿಸಲಾಗಿದ್ದು ಇವರು ಹುಲಿ ಮತ್ತು ಚಿರತೆಯನ್ನು ಚರ್ಮ ಹಾಗೂ ಇತರ ವಸ್ತುಗಳಿಗಾಗಿ ಉರುಳು ಹಾಗೂ ಚಾಮ್ ಟ್ರಾಪ್ ಬಳಸಿ ಭೇಟೆಯಾಡುತ್ತಿದ್ದರು ಎನ್ನಲಾಗಿದ್ದು, ಈ ನಾಲ್ವರನ್ನು ಬಂಧಿಸಿರುವ ಅರಣ್ಯ ಸಂಚಾರಿ ದಳದವರು ಇವರಿಂದ ಹುಲಿ ಹಾಗೂ ಚಿರತೆ ಚರ್ಮ, ಉರುಳು ಹಾಗೂ ಚಾಮ್- ಟ್ರಾಮ್ ಹಾಗೂ ಒಂದು ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಉರುಳು ಹಾಕಿ ಹುಲಿಯನ್ನು ಕೊಂದಿದ್ದರು
ಹುಣಸೂರು ತಾಲೂಕಿನ ವೀರನ ಹೊಸಳ್ಳಿಯ ಅರಣ್ಯ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳ ಹಿಂದೆ ಆನೆ ಕಂದಕದಲ್ಲಿ ಭೇಟೆಗಾಗಿ ಆರೋಪಿ ರಮೇಶ್ ಉರುಳು ಹಾಕಿದ್ದರು ಆ ಉರುಳಿಗೆ ಹುಲಿವೊಂದು ಸಿಲುಕಿ ಸಾವನ್ನಪ್ಪಿತ್ತು ನಂತರ ಇತರ ಆರೋಪಿಗಳಾದ ರವಿ, ನಂಜುಂಡ, ಅರುಣ, ಆ ಹುಲಿಯನ್ನು ತೆಗೆದುಕೊಂಡು ಹೋಗಿ ಅದರ ಚರ್ಮ ತೆಗೆದು ದೇಹವನ್ನು ಲಕ್ಷ್ಮಣ ತೀರ್ಥ ನದಿಯಲ್ಲಿ ಬಿಸಾಡಿ ಬಂದಿದ್ದರು. ಲಾಕ್-ಡೌನ್ ಸಂದರ್ಭದಲ್ಲಿ ಜನ ಸಂದಣಿ ಕಡಿಮೆ ಇತ್ತು ಆದ್ದರಿಂದ ಇವರ ಕೆಲಸ ನಿರಾತಂಕವಾಗಿ ನಡೆದಿತ್ತು.