ಮೈಸೂರು: ಮೈಸೂರಿನಲ್ಲಿ 3ನೇ ವ್ಯಕ್ತಿಗೆ ಕೊರೋನಾ ವೈರಸ್ ಧೃಡವಾಗಿದ್ದು, ಆತ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಇತರ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಾರ್ಮಿಕರನ್ನು ಮನೆಯಿಂದ ಹೊರಬಾರದಂತೆ ನಿರ್ಬಂಧಿಸಲಾಗಿದೆ.
ಮೈಸೂರಲ್ಲಿ 3ನೇ ಕೊರೊನಾ ಧೃಡ: ಕಾರ್ಮಿಕರಿಗೆ ಹೊರಬಾರದಂತೆ ಸೂಚನೆ - corona latest news
ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಕೊರೊನಾ ಸೋಂಕಿತ ಕಾರ್ಖಾನೆಯ ಔಷಧಿ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರಿಂದ ಸೋಂಕು ತಗುಲಿರಬಹುದು ಎನ್ನಲಾಗಿದೆ.
ಕೊರೋನಾ ವೈರಸ್ ಪತ್ತೆಯಾದ ಮೂರನೇ ವ್ಯಕ್ತಿ ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜುಬೀಲಿಯಂಟ್ ಕಾರ್ಖಾನೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು, ಹಾಗೂ ಕಾರ್ಖಾನೆಯ ಔಷಧಿ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರಿಂದ ಸೋಂಕು ತಗುಲಿರಬಹುದು ಎನ್ನಲಾಗಿದೆ.
ಈತ ಔಷಧಿ ಕಂಪನಿಯ ಅನೇಕ ವೃತ್ತಿಪರರೊಂದಿಗೆ ಸಂಪರ್ಕದಲ್ಲಿದ್ದನು, ಈತನ ಜೊತೆ ಕೆಲಸ ಮಾಡುತ್ತಿದ್ದ 7 ಜನ ಕಾರ್ಮಿಕರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ಇದಲ್ಲದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 925 ಜನರ ವಿವರ ಪಡೆದುಕೊಂಡು ಮನೆಯಲ್ಲೆ ಇರುವಂತೆ ತಿಳಿಸಲಾಗಿದೆ.
TAGGED:
ಕೊರೊನಾ ವೈರಸ್ ಲೆಟೆಸ್ಟ್ ನ್ಯೂಸ್