ಮೈಸೂರು : ಸಾರಿಗೆ ನೌಕರರ 4 ದಿನದ ಮುಷ್ಕರದಿಂದ ಕೆಎಸ್ಆರ್ಟಿಸಿ ಮೈಸೂರು ವಿಭಾಗಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ಮತ್ತು ನಗರ ವಿಭಾಗದಲ್ಲಿ ಅಂದಾಜು 3.20 ಕೋಟಿ ನಷ್ಟ ಉಂಟಾಗಿದೆ. ಈ ಪೈಕಿ ಗ್ರಾಮಾಂತರ ವಿಭಾಗದಲ್ಲಿ 2.40 ಕೋಟಿ ಮತ್ತು ನಗರ ಸಾರಿಗೆ ವಿಭಾಗದಲ್ಲಿ 80 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.