ಕರ್ನಾಟಕ

karnataka

ETV Bharat / state

ಅನಗತ್ಯ ಓಡಾಟ ನಡೆಸಿದ 281 ವಾಹನಗಳು ಜಪ್ತಿ - vehicles seized in Mysore latest news

ಸರ್ಕಾರ ಮಾರ್ಗಸೂಚಿಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಾಗಿ ತಪಾಸಣೆ ಮಾಡಲಾಗುತ್ತದೆ..

281 vehicles seized in Mysore
ಅನಗತ್ಯ ಓಡಾಟ ನಡೆಸಿದ 281 ವಾಹನಗಳು ಜಪ್ತಿ

By

Published : Apr 30, 2021, 1:23 PM IST

ಮೈಸೂರು : ಕೊರೊನಾ ನಿಯಮ ಉಲ್ಲಂಘಿಸಿ, ಅನಗತ್ಯವಾಗಿ ಓಡಾಟ ಮಾಡಿದ 281 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

248 ಬೈಕ್, 4 ಆಟೋ, 1 ಗೂಡ್ಸ್ ಆಟೋ, 28 ಕಾರುಗಳು ಸೇರಿ 281 ವಾಹನಗಳನ್ನು ಏ.29ರಂದು ವಶಪಡಿಸಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಏ.27ರಿಂದ ಮೇ 12ರ ವರೆಗೆ ಕೊರೊನಾ ಕರ್ಫ್ಯೂ ಇದೆ. ಹಾಗಾಗಿ, ಮೈಸೂರು ನಗರದಲ್ಲಿ ಕೊರೊನಾ ಕರ್ಫ್ಯೂ ಟೈಟ್ ಮಾಡಿರುವ ಪೊಲೀಸರು, ವಾಹನಗಳ ತಪಾಸಣೆ ಬಿಗಿಗೊಳಿಸಿದ್ದಾರೆ.

ಅನಗತ್ಯ ಓಡಾಟ ನಡೆಸಿದ 281 ವಾಹನಗಳು ಜಪ್ತಿ..

ನಿನ್ನೆ ಒಂದೇ ದಿನ 281 ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸರ್ಕಾರ ಮಾರ್ಗಸೂಚಿಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಾಗಿ ತಪಾಸಣೆ ಮಾಡಲಾಗುತ್ತದೆ.

ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ವಶಪಡಿಸಿಕೊಂಡು, ಸಂಬಂಧಪಟ್ಟವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ABOUT THE AUTHOR

...view details