ಮೈಸೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣ ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿದ್ದು ಇಂದು ಹೊಸದಾಗಿ 281 ಮಂದಿಗೆ ಸೋಂಕು ಧೃಡಪಟ್ಟಿದೆ. ಆಸ್ಪತ್ರೆಯಿಂದ 18 ಜನ ಡಿಸ್ಚಾರ್ಜ್ ಆಗಿದ್ದು, 6 ಮಂದಿ ಸಾವನ್ನಪ್ಪಿದಾರೆ.
ಇಂದು 281 ಮಂದಿಗೆ ಸೋಂಕು, ಮೈಸೂರಿನಲ್ಲಿ 18 ಮಂದಿ ಡಿಸ್ಚಾರ್ಜ್ - Covid-19 latest news
ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣ ಹಾಗೂ ಸಾವಿನ ಸಂಖ್ಯೆಗಳು ಸಹ ಹೆಚ್ಚಾಗುತ್ತಿವೆ. ಇಂದು 281 ಸೋಂಕಿತ ಪ್ರಕರಣ ವರದಿಯಾಗಿವೆ..
ಮೈಸೂರಿನಲ್ಲಿ ಇಂದು 281 ಮಂದಿಗೆ ಕೊರೊನಾ ದೃಢ
ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣ ಹಾಗೂ ಸಾವಿನ ಸಂಖ್ಯೆಗಳು ಸಹ ಹೆಚ್ಚಾಗುತ್ತಿವೆ. ಇಂದು 281 ಸೋಂಕಿತ ಪ್ರಕರಣ ವರದಿಯಾಗಿವೆ. ಈವರೆಗೆ ಒಟ್ಟು 2,450 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಟ್ಟು 749 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು 1,602 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 99 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.