ಮೈಸೂರು: ರಜೆಯ ಮೇಲೆ ಊರಿಗೆ ಬಂದ ಸಂಚಾರಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕು ಮೇದೂರು ಎ.ಕೊಪ್ಪಲಿನಲ್ಲಿ ನಡೆದಿದೆ.
ಹೃದಯಾಘಾತದಿಂದ ಸಾವನ್ನಪ್ಪಿದ 26 ವರ್ಷದ ಪೇದೆ - ಮಹೇಶ್
ಟ್ರಾಫಿಕ್ ಪೋಲಿಸ್ ವಿಭಾಗದಲ್ಲಿ ಕಾರ್ಯ ನಿವರ್ಹಿಸುತ್ತಿದ್ದ 26 ವರ್ಷದ ಪೇದೆಯೊಬ್ಬ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಪೇದೆ
26 ವರ್ಷದ ಮಹೇಶ್ ಎಂಬುವವತೆ ಹೃದಯಾಘಾತದಿಂದ ಮೃತ ಪಟ್ಟ ಪೇದೆ. ಈತ ನಂಜನಗೂಡು ಸಂಚಾರಿ ಠಾಣೆಯಲ್ಲಿ ಟ್ರಾಫಿಕ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದ. ನೆನ್ನೆ ರಜೆಯ ಮೇಲೆ ಊರಿಗೆ ಬಂದಿದ್ದ ಮಹೇಶ್ಸಂಜೆ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹುಣಸೂರಿನ ರೆಸಾರ್ಟ್ಗೆ ತೆರಳಿದ್ದರು. ಪಾರ್ಟಿ ಮುಗಿಸಿ ಪಾರ್ಟಿ ಮುಗಿಸಿ ವಾಪಸ್ ಬರುವಾಗ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ.
ಈ ಸಂಬಂಧ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.