ಮೈಸೂರು:ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟ್ ಲಾಮಾಕ್ಯಾಂಪ್‌ನಲ್ಲಿ 23 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಸ್ಥಳಕ್ಕೆ ಟಿಎಚ್‌ಒ ಡಾ.ಶರತ್ ಬಾಬು ಅವರು ಭೇಟಿ ನೀಡಿ ಪರಿಶೀಲಿಸಿದರು.
ಮೈಸೂರು: ಟಿಬೆಟಿಯನ್ ಕ್ಯಾಂಪ್‌ನ 23 ಜನರಿಗೆ ವಕ್ಕರಿಸಿದ ಕೊರೊನಾ - ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಟಿಬೆಟ್ ಲಾಮಾಕ್ಯಾಂಪ್
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟ್ ಲಾಮಾಕ್ಯಾಂಪ್‌ನಲ್ಲಿ 23 ಜನರಿಗೆ ಕೊರೊನಾ ವಕ್ಕರಿಸಿದೆ. ಈ ಹಿನ್ನೆಲೆ ಕ್ಯಾಂಪ್ಗೆ ಟಿಎಚ್‌ಒ ಡಾ.ಶರತ್ ಬಾಬು ಭೇಟಿ ನೀಡಿ ಪರಿಶೀಲಿಸಿದರು.
ಟಿಬೆಟ್ ಕ್ಯಾಂಪ್‌ನ 23 ಜನರಿಗೆ ವಕ್ಕರಿಸಿದ ಕೊರೊನಾ
23 ಕೊರೊನಾ ಪ್ರಕರಣಗಳು ಕಂಡು ಬಂದಿರುವುದರಿಂದ ಟಿಬೆಟಿಯನ್ ಸೆಟಲ್ಮೆಂಟ್ ಅಧಿಕಾರಿಗಳಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಸೂಚನೆ ನೀಡಿದರು.
ರೂಪಾಂತರ ಕೊರೊನಾ ವೈರಸ್ ತಡೆಯಲು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಹೊರ ರಾಜ್ಯಗಳಿಂದ ಆಗಮಿಸುವ ಮತ್ತು ಶಬರಿಮಲೆಗೆ ಹೋಗಿ ಬರುವ ಯಾತ್ರಾರ್ಥಿಗಳಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುವುದು ಮತ್ತು 10 ದಿನಗಳವರೆಗೆ ನಿಗಾ ಇಡುವಂತೆ ಟಿಎಚ್‌ಒ ಡಾ.ಶರತ್ ಬಾಬು ತಿಳಿಸಿದ್ದಾರೆ.